ಮಹಿಳಾ ಪ್ರಾತಿನಿಧ್ಯ: ಕೊನೆಗೂ ಮಹಿಳಾ ಮೀಸಲಾತಿಗೆ ಲೋಕಸಭೆ ಅಂಗೀಕಾರ; ಶುರುವಾಯಿತು ಪಾಲಿಟಿಕ್ಸ್ ಚರ್ಚೆ..! - Mahanayaka
1:55 PM Saturday 21 - September 2024

ಮಹಿಳಾ ಪ್ರಾತಿನಿಧ್ಯ: ಕೊನೆಗೂ ಮಹಿಳಾ ಮೀಸಲಾತಿಗೆ ಲೋಕಸಭೆ ಅಂಗೀಕಾರ; ಶುರುವಾಯಿತು ಪಾಲಿಟಿಕ್ಸ್ ಚರ್ಚೆ..!

20/09/2023

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಮತದಾನ ಮೂಲಕ ಐತಿಹಾಸಿಕ ಮಸೂದೆ ನಾರಿ ಶಕ್ತಿ ವಂದನಾ ಅಧಿನಿಯಮ ಅಂಗೀಕಾರಗೊಂಡಿದೆ.

ಮಹಿಳಾ ಮೀಸಲಾತಿ ವಿಧೇಯಕ ಪರ 454 ಸಂಸದರು ಮತದಾನ ಮಾಡಿದರು. ಇದೇ ವೇಳೆ ವಿಧೇಯಕದ ವಿರುದ್ಧ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ.

ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆ ನಂತರ ಸ್ಪೀಕರ್ ಓಂ ಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದರು. ಆನಂತರ ಮತ ಪತ್ರಗಳ ಮೂಲಕ ಸಂಸದರು ಮತ ಚಲಾಯಿಸಿದರು.
ಯಾಕೆಂದರೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.


Provided by

ಮಹಿಳಾ ಮೀಸಲಾತಿ ಮಸೂದೆಯ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಆಗಮಿಸಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಇದು ಐದನೇ ಪ್ರಯತ್ನವಾಗಿದೆ. ದೇವೇಗೌಡರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ನಾಲ್ಕು ಬಾರಿ ಈ ಮಸೂದೆ ತರಲು ಪ್ರಯತ್ನಿಸಲಾಗಿತ್ತು. ಈ ಮಸೂದೆ ಅಂಗೀಕಾರವಾಗದಿರಲು ಕಾರಣವೇನು ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪ್ರಸ್ತುತ ಸಾಮಾನ್ಯ, ಎಸ್ ಸಿ, ಎಸ್ ಟಿ 3 ವರ್ಗಗಳಲ್ಲಿ ಚುನಾಯಿತರಾಗಿರುವ ಸಂಸದರು, ಪ್ರತಿಯೊಂದರಲ್ಲೂ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆ ಏನೆಂದರೆ ಅವರ ಬೇರುಗಳು ಭಾರತದಲ್ಲಿಲ್ಲ. ಅವರು ಎಲ್ಲಿದ್ದಾರೆ ಎಂದು ನಾನು ಹೇಳಲು ಬಯಸುವುದಿಲ್ಲ ಎಂದು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.

ಸಂಸತ್​​ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ಕೋಟಾದ ಕೊರತೆಯಿಂದಾಗಿ ಈ ಕ್ರಮವು ‘ಅಪೂರ್ಣ’ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ