ಮುಸ್ಲಿಮ್ ವ್ಯಕ್ತಿಯ ಪಾರ್ಥಿವ ಶರೀರ ಸಾಗಿಸಲು ದಾರಿ ಮಾಡಿಕೊಟ್ಟ ಹನುಮ ಮಾಲಾಧಾರಿಗಳು!
ಕೊಪ್ಪಳ: ಸಮಾಜದ ಸ್ವಾಸ್ಥ್ಯ ಕೆಡಿಸಲು ಜಾತಿ ಧರ್ಮಗಳ ನಡುವೆ ಕಿಡಿ ಹೊತ್ತಿಸುತ್ತಿರುವ ಘಟನೆಗಳ ನಡುವೆಯೇ ಭಾರತದಲ್ಲಿ ಇನ್ನೂ ಕೂಡ ಸೌಹಾರ್ದತೆ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಕೊಪ್ಪಳದಲ್ಲೊಂದು ವಿಶೇಷ ಘಟನೆ ನಡೆದಿದೆ.
ಮುಸ್ಲಿಮ್ ಸಮಾಜದ ವ್ಯಕ್ತಿಯ ಪಾರ್ಥಿವ ಶರೀರ ಸಾಗಿಸುತ್ತಿರುವ ವೇಳೆ ಹನುಮ ಮಾಲಾಧಾರಿಗಳು ಕೆಲ ಕಾಲ ಡಿಜೆ ಸಿಸ್ಟಮ್ ಬಂದ್ ಮಾಡಿ ಮುಸ್ಲಿಮ್ ಸಮಾಜಕ್ಕೆ ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದೆ. ಹನುಮ ಮಾಲಾಧಾರಿಗಳ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಾಜದಲ್ಲಿ ಇಂತಹ ಸಾಮರಸ್ಯದ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಭಾರತವು ವಿವಿಧತೆಯಲ್ಲಿ ಏಕತೆ ಕಂಡ ರಾಷ್ಟ್ರವಾಗಿದೆ. ಇಲ್ಲಿ ಸಾಕಷ್ಟು ವೈವಿಧ್ಯಮಯ ಸಂಸ್ಕೃತಿ, ಆಹಾರ, ಜೀವನ ಶೈಲಿ ಇದೆ. ಆದರೆ, ಇತ್ತೀಚೆಗೆ ಒಂದೇ ಸಂಸ್ಕೃತಿ, ಒಂದೇ ಆಹಾರ ಶೈಲಿ, ಜೀವನ ಶೈಲಿ ಇರಬೇಕು ಎಂಬ ಕಾನೂನು ಬಾಹಿರ ವಾದವನ್ನು ಮುಂದಿಡುತ್ತಿರುವುದರಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಇಂತಹ ಘಟನೆಗಳು ನಮ್ಮ ಸಮಾಜಕ್ಕೆ ಮಾದರಿಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10
ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣಿನ ಜೊತೆಗೆ ಶೇಂಗಾ ಮಿಠಾಯಿ ನೀಡಲು ನಿರ್ಧಾರ!
ವಿಧಾನ ಪರಿಷತ್ ಫಲಿತಾಂಶ: ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು
ವಿಧಾನ ಪರಿಷತ್ ಚುನಾವಣಾ ಫಲಿತಾಂಶ: ಬಿಜೆಪಿ ಗೆಲುವು ಸಾಧಿಸಿದ ಕ್ಷೇತ್ರಗಳು
ವಿಧಾನ ಪರಿಷತ್ ದ್ವಿಸದಸ್ಯತ್ವ ಚುನಾವಣೆ: ಗೆಲುವು ಸಾಧಿಸಿದ ಕೋಟ ಶ್ರೀನಿವಾಸ್ ಪೂಜಾರಿ, ಮಂಜುನಾಥ್ ಭಂಡಾರಿ