ದೆಹಲಿ ಮೆಟ್ರೋದಲ್ಲಿ ಮದ್ಯ ಸೇವಿಸಿದ ಪ್ರಯಾಣಿಕ: ವಾಸ್ತವಾಂಶ ತಿಳಿದಾಗ ಜನರಿಗೆ ಶಾಕ್!

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮದ್ಯ ಸೇವಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಘಟನೆಯ ಸತ್ಯಾಂಶ ಬಯಲಾಗಿದೆ.
ಇನ್ ಸ್ಟಾಗ್ರಾಮ್ ಖಾತೆ ‘ಫುಡ್ ರಿಪಬ್ಲಿಕ್ ಇಂಡಿಯಾ’ದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ಸಾರಿಗೆ ಸಂಸ್ಥೆ ಮೆಟ್ರೋದಲ್ಲಿ ಹೀಗೆ ಬಹಿರಂಗವಾಗಿ ಮದ್ಯ ಸೇವಿಸಬಹುದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಡಿಯೋದಲ್ಲಿ ಗ್ಲಾಸ್ ನಲ್ಲಿ ಮದ್ಯ ಸೇವಿಸಿದ ಬಳಿಕ ಪ್ರಯಾಣಿಕ ಮೊಟ್ಟೆಯ ಸಿಪ್ಪೆ ಸುಲಿದು ತಿನ್ನುತ್ತಿರುವ ದೃಶ್ಯ ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡಿತ್ತು. ಆದ್ರೆ ಇದೀಗ ವಾಸ್ತವಾಂಶ ಬೆಳಕಿಗೆ ಬಂದಿದೆ.
ವಾಸ್ತವವಾಗಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಆ ಯುವಕ ಮದ್ಯ ಸೇವಿಸುತ್ತಿರಲಿಲ್ಲ. ಮದ್ಯದ ಬಣ್ಣವನ್ನೇ ಹೊಂದಿರುವ ಸ್ಪಾರ್ಕ್ಲಿ ಆಪಲ್ ಜ್ಯೂಸ್ ಪಾನೀಯವಾದ ಅಪ್ಪಿ ಫಿಜ್ ನ್ನು ಆತ ಸೇವನೆ ಮಾಡಿದ್ದ. ಆದ್ರೆ ಆತ ಬಳಸಿರುವ ಗ್ಲಾಸ್ ಹಾಗೂ ಮದ್ಯದ ಬಣ್ಣವನ್ನೇ ಹೋಲುವ ಜ್ಯೂಸ್ ನ ಕಲರ್ ನೋಡಿ ಜನರು ಅದು ಮದ್ಯ ಎಂದೇ ಭಾವಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: