ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಎಸೆದ ಆರೋಪಿಗಳ ಬಂಧನ - Mahanayaka

ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಎಸೆದ ಆರೋಪಿಗಳ ಬಂಧನ

death
26/01/2022

ಬೆಂಗಳೂರು : ವ್ಯಕ್ತಿಯೋರ್ವನ ಕತ್ತು ಹಿಸುಕಿ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಿರಲೆಂದು ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಕೆರೆಯಲ್ಲಿ ಎಸೆದು ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.

ದಿವಾಕರ್ ಎಂಬಾತ ಕೊಲೆಯಾದ ವ್ಯಕ್ತಿ. ಬನಶಂಕರಿಯ ಸರೆಬಂಡೆಪಾಳ್ಯ ನಿವಾಸಿ ಲಕ್ಷ್ಮಿ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು, ತುಮಕೂರು ಮೂಲದ ಮಂಜುನಾಥ್ ಹಾಗೂ‌ ಮುನಿರಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಲವು ವರ್ಷಗಳಿಂದ ಎಸ್ಎ ಸ್ಆ  ರ್  ಗೋಲ್ಡ್ ಕಂಪೆನಿಯಲ್ಲಿ ದಿವಾಕರ್ ಕೆಲಸ ಮಾಡುತ್ತಿದ್ದು, ಜನರಿಂದ ಚಿನ್ನ ಪಡೆದು ಹಣ ನೀಡುವ ವ್ಯವಹಾರ ಮಾಡುತ್ತಿದ್ದ. ಐಷರಾಮಿ ಜೀವನಕ್ಕಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು, ಗೂಗಲ್ ​ನಲ್ಲಿ ಸರ್ಚ್ ಮಾಡಿ‌ದಾಗ ಎಸ್ ​ಎಸ್ ​ಆರ್  ಗೋಲ್ಡ್ ಕಂಪೆನಿ ಹೆಸರನ್ನು ತೋರಿಸಿದೆ‌. ಕಸ್ಟಮರ್ ಕೇರ್​ ನಂಬರ್ ​​ಗೆ ಕರೆ ಮಾಡಿ ದಿವಾಕರ್ ನಂಬರ್ ಪಡೆದಿದ್ದಾರೆ‌.

ಜ. 19ರಂದು ಕರೆ‌ ಮಾಡಿ ನಮಗೆ ಹಣದ ಅಗತ್ಯವಿದೆ. ಹೀಗಾಗಿ, 65ರಿಂದ 70 ಗ್ರಾಂ ಚಿನ್ನಾಭರಣ ಮಾರಾಟ ಮಾಡುತ್ತೇವೆ. ಹಣ ಸಮೇತ ಸುಂಕದಕಟ್ಟೆಗೆ ಬನ್ನಿ ಎಂದಿದ್ದಾರೆ. ಇದರಂತೆ ₹5 ಲಕ್ಷ ಹಣ ಇಟ್ಟುಕೊಂಡು ಜ. 20ರಂದು ಬೈಕ್‌ ನಲ್ಲಿ ಸುಂಕದಕಟ್ಟೆಯ ಆರೋಪಿಗಳ ಮನೆಯೊಂದಕ್ಕೆ ದಿವಾಕರ್ ಹೋಗಿದ್ದಾರೆ.

ಮಾತುಕತೆ ನೆಪದಲ್ಲಿ ಇಬ್ಬರು ಆರೋಪಿಗಳು ದಿವಾಕರ್‌ ನನ್ನು ಕತ್ತು ಹಿಸುಕಿ‌ ಸಾಯಿಸಿದ್ದಾರೆ. ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕಟ್ಟಿದ್ದಾರೆ.‌ ಬಳಿಕ ಮಾಗಡಿ ರೋಡ್ ​ನ ಹೊನ್ನಾಪುರ ಕೆರೆಗೆ ಎಸೆದಿದ್ದಾರೆ‌‌. ಆತನ ಬೈಕ್ ಅನ್ನು ಸಹ ಕೆರೆಯಲ್ಲಿ ಮುಳುಗಿಸಿ ಸಾಕ್ಷ್ಯ ನಾಶಪಡಿಸಿದ್ದಾರೆ.

ಮತ್ತೊಂದೆಡೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಿವಾಕರ್ ನಾಪತ್ತೆಯಾಗಿರುವುದಾಗಿ ದೂರು ನೀಡಿದ ಮೇರೆಗೆ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಿಚ್ ಆಫ್ ಮಾಡಿಕೊಂಡಿದ್ದ ದಿವಾಕರ್​ನ ಮೊಬೈಲ್ ನಂಬರ್​ನ ಒಳ ಹಾಗೂ ಹೊರ ಬರುವ ಕರೆಯ ಲಿಸ್ಟ್​ ಅನ್ನು ಪರಿಶೀಲಿಸಿದಾಗ ಕೊನೆಯದಾಗಿ ಆರೋಪಿಗಳು ಕರೆ ಮಾಡಿರುವ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾನವ ಕಳ್ಳಸಾಗಣೆ: 41 ಆರೋಪಿಗಳಿಗೆ ಕಠಿಣ ಶಿಕ್ಷೆ

ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್‌ ಗೆ ಹೋಗುತ್ತಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಪಘಾತದಲ್ಲಿ ಮರ್ಮಾಂಗ ಕಳೆದುಕೊಂಡ ಯುವಕನಿಗೆ 17.66 ಲಕ್ಷ ರೂ. ಪರಿಹಾರ

ಬೆತ್ತಲೆ ಗ್ಯಾಂಗ್ ಬ್ಲಾಕ್ ​ಮೇಲ್​​: ರೈಲಿಗೆ ತಲೆ ಕೊಟ್ಟು ಇಂಜಿನಿಯರ್ ಆತ್ಮಹತ್ಯೆಗೆ ಶರಣು

ವಿಮಾನ ನಿಲ್ದಾಣದಲ್ಲಿ 29 ಲಕ್ಷ ರೂ. ಮೌಲ್ಯದ ಚಿನ್ನ ವಶ

ಇತ್ತೀಚಿನ ಸುದ್ದಿ