ದೀಪಾವಳಿಗಾಗಿ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ ಸ್ಟೋಟರ್ ನಲ್ಲೇ ಬ್ಲಾಸ್ಟ್ | ತಂದೆ ಮಗನ ದೇಹ ಛಿದ್ರಛಿದ್ರ!
ಪುದುಚೇರಿ: ಅಪ್ಪ ಮಗ ಪಟಾಕಿ ಖರೀದಿಸಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಪಟಾಕಿ ಸ್ಫೋಟಗೊಂಡಿದ್ದು, ಪರಿಣಾಮವಾಗಿ ತಂದೆ ಮಗ ಇಬ್ಬರ ದೇಹವೂ ಛಿದ್ರಛಿದ್ರವಾಗಿರುವ ದುರಂತ ಘಟನೆ ನಡೆದಿದೆ.
ಮಾಹಿತಿಗಳ ಪ್ರಕಾರ ಪಟಾಕಿ ಬಾಕ್ಸ್ ಗಳನ್ನು ಸ್ಕೂಟರ್ ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ, ಮಗನನ್ನು ಪಟಾಕಿ ಬಾಕ್ಸ್ ನ ಮೇಲೆ ಕೂರಿಸಿಕೊಂಡು ತಂದೆ ಹೋಗಿದ್ದು, ಈ ವೇಳೆ ಏಕಾಏಕಿ ಪಟಾಕಿ ಬ್ಲಾಸ್ಟ್ ಆಗಿದೆ. ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಪುದುಚೇರಿ ನಿವಾಸಿಗಳಾದ ಕಲೈನೇಸನ್ ಹಾಗೂ ಅವರ ಪುತ್ರ ಈ ಘಟನೆಯಲ್ಲಿ ದುರಂತ ಸಾವಿಗೀಡಾಗಿದ್ದಾರೆ. ದೀಪಾವಳಿ ಸಂಭ್ರಮಕ್ಕಾಗಿ ಖರೀದಿಸಿದ್ದ ಪಟಾಕಿಯೇ ತಂದೆ ಮಗನ ಪ್ರಾಣಕ್ಕೆ ಸಂಚಕಾರವಾಗಿರುವುದು ದುರಂತ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಇನ್ನೂ ಪಟಾಕಿ ಎಷ್ಟೊಂದು ಮನರಂಜನಕಾರಿಯೋ ಅಷ್ಟೇ ಅಪಾಯಕಾರಿ ಕೂಡ. ಪಟಾಕಿ ಹಚ್ಚುವಾಗ, ಸಾಗಿಸುವಾಗ, ಮಾರಾಟ ಮಾಡುವಾಗ, ತಯಾರಿಸುವಾಗ ಬಹಳ ಜಾಗೃತರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka