ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು - Mahanayaka

ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು

ct ravi
21/12/2021

ಚಿಕ್ಕಮಗಳೂರು: ಸಿಟಿ ರವಿ ಅಲ್ಲ, ಪಟಾಕಿ ರವಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಟಾಕಿ ಒಂದು ಸಂಸ್ಕೃತಿಯ ಸಂಕೇತ. ನಾನು ಕೇಡಿ ರವಿ ಅಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ಜನರ ಜೊತೆಗೆ ಹೋರಾಟ ಮಾಡಿಕೊಂಡು, ಚಳುವಳಿಗಾರನಾಗಿ ಬೆಳೆದ ಟ್ರ್ಯಾಕ್​​ ರೆಕಾರ್ಡರ್. ನನ್ನ ಟ್ರ್ಯಾಕ್​​ ರೆಕಾರ್ಡರ್ ಬಹಳ ಶುದ್ಧವಾಗಿದೆ. ನನ್ನ ಟ್ರ್ಯಾಕ್​​ ರೆಕಾರ್ಡರ್​ನಲ್ಲಿ ತಿಹಾರ್​ ಜೈಲು ಇಲ್ಲ. ನಾನು ತಿಹಾರ್​ ಜೈಲಿನ ರಿಟರ್ನ್​ ಅಲ್ಲ ಎಂದರು.

ತುಕ್ಡೆ ಗ್ಯಾಂಗ್​ನಲ್ಲಿದ್ದವರೆಲ್ಲಾ ಕಾಂಗ್ರೆಸ್​ ಸೇರಿಕೊಂಡಿದ್ದಾರೆ. ಅದು ಕನ್ಹಯ್ಯ ಕುಮಾರ್ ಇರಬಹುದು ಅಥವಾ ಗುಜರಾತಿನ ಹಾರ್ಥಿಕ್​ ಪಟೇಲ್​ ಇರಬಹುದು. ಅವರೆಲ್ಲರೂ ತುಕ್ಡೆ ಗ್ಯಾಂಗ್​ನವರು. ಬಹುಶಃ ಅವರೆಲ್ಲರೂ ಟ್ಯೂನ್​ ಮಾಡಿದ್ದಾರೋ ಅಥವಾ ಇವರ ಹಳೇ ಚಾಳಿ ಮತ್ತೆ ಮೇಲೆ ಬಂದಿದೆಯೋ ಗೊತ್ತಿಲ್ಲ ಎಂದರು.

ಇದರ ಹಿಂದೆ ಕಾಂಗ್ರೆಸ್​ ಇರುವುದು ಸ್ಪಷ್ಟ. ಈಗಾಗಲೇ ಕಾಂಗ್ರೆಸ್​ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರ ವಿಚಾರಣೆ ನಡೆಯುತ್ತಿದೆ. ಯಾರು ಅವರಿಗೆ ಹಫ್ತಾ ಕೊಟ್ಟಿದ್ದಾರೆ ಎಂದು ಗೊತ್ತಾದಾಗ ಮಾಡಿಸಿದವರು ಜೈಲಿಗೆ ಹೋಗುವ ದಿನ ದೂರವಿಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಂಇಎಸ್‌ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಪಾಕ್‌ ಕ್ರಿಕೆಟರ್‌ ವಿರುದ್ಧ ಎಫ್‌ ಐಆರ್‌

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಸ್ನೇಹಿತರು

ಓಮಿಕ್ರಾನ್ ಪ್ರಕರಣ: ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತಾ? | ತಜ್ಞರು ನೀಡಿದ ಸಲಹೆ ಏನು?

ಭೀಕರ ಚಂಡಮಾರುತ: ಮೃತರ ಸಂಖ್ಯೆ 375ಕ್ಕೆ ಏರಿಕೆ

ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಕರ ಆಸ್ತಿ ಮುಟ್ಟುಗೋಲು: ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ

ಇತ್ತೀಚಿನ ಸುದ್ದಿ