ಪಟಾಕಿ ಶಬ್ದಕ್ಕೆ ಬೆಚ್ಚಿ ಬಿದ್ದ ಆನೆ: ದಿಕ್ಕಾಪಾಲಾಗಿ ಓಡಿದ ಜನರು - Mahanayaka
11:02 AM Wednesday 12 - March 2025

ಪಟಾಕಿ ಶಬ್ದಕ್ಕೆ ಬೆಚ್ಚಿ ಬಿದ್ದ ಆನೆ: ದಿಕ್ಕಾಪಾಲಾಗಿ ಓಡಿದ ಜನರು

jamboo savari gopalaswamy
09/10/2021

ಮಂಡ್ಯ: ಶ್ರೀರಂಗಪಟ್ಟಣ ದಸರಾದ ವೇಳೆ ಪಟಾಕಿ ಶಬ್ದಕ್ಕೆ ಬೆಚ್ಚಿ ಬಿದ್ದ ಆನೆ ಒಂದು ಸುತ್ತು ತಿರುಗಿ ನಿಂತ ಘಟನೆ ನಡೆದಿದ್ದು, ಇದರಿಂದಾಗಿ ಸ್ಥಳದಲ್ಲಿದ್ದ ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.

ಗೋಪಾಲಸ್ವಾಮಿ ಎಂಬ ಆನೆ ಮರದ ಅಂಬಾರಿ ಹೊತ್ತು  ಜಂಬೂಸವಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ ಶ್ರೀರಂಗಪಟ್ಟಣದ ಬನ್ನಿಮಂಟಪದ ಸಮೀಪ ಬರುತ್ತಿದ್ದಂತೆಯೇ ಪಟಾಕಿ ಸಿಡಿಸಲಾಗಿದೆ. ಈ ಶಬ್ಧಕ್ಕೆ ಗೋಪಾಲಸ್ವಾಮಿ ಆನೆ ಬೆಚ್ಚಿಬಿದ್ದು, ಒಂದು ಸುತ್ತು ತಿರುಗಿದೆ. ಈ ವೇಳೆ ಆನೆಯ ಸಮೀಪದಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.

ಬಳಿಕ ವಾದ್ಯ ಧ್ವನಿವರ್ಧಕಗಳನ್ನು ಬಂದ್ ಮಾಡಿ ಗೋಪಾಲ ಸ್ವಾಮಿಯನ್ನು ಸಮಾಧಾನ ಮಾಡಲಾಗಿದೆ. ಏಕಾಏಕಿ ಈ ರೀತಿಯ ಘಟನೆ ನಡೆದಿದ್ದರಿಂದಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿ ಸ್ಥಗಿತಗೊಳಿಸಲಾಯಿತು. ಆನೆಯ ಮೇಲಿದ್ದ ಅಂಬಾರಿಯನ್ನು ಇಳಿಸಿ ಮೆರವಣಿಗೆ ಮುಂದುವರಿಸಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಗಂಗೊಳ್ಳಿ: ಹಿಂದೂಗಳ ಮೀನುಮಾರುಕಟ್ಟೆಯನ್ನು ಮುಸ್ಲಿಮರು ಬಹಿಷ್ಕರಿಸಿದ್ದು ಯಾಕೆ? | ಒಂದೇ ತಾಯಿ ಮಕ್ಕಳಂತಿದ್ದವರ ನಡುವೆ ಏನಿದು ಗಲಾಟೆ?

ಶಾಕಿಂಗ್ ನ್ಯೂಸ್: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯ ಕೊಳೆತ ಶವಪತ್ತೆ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ!

ರೈತರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ | ಭೀಮ್ ಆರ್ಮಿ ಎಚ್ಚರಿಕೆ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಮಕ್ಕಳು ಜ್ಯೂಸ್ ಕುಡಿದ ಬಳಿಕ ಜ್ಯೂಸ್ ಗೆ ವಿಷ ಬೆರೆಸಿದ್ದೇನೆ, ನಾನೂ ವಿಷ ಕುಡಿದ್ದೇನೆ ಎಂದ ತಂದೆ!

ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು

ಇತ್ತೀಚಿನ ಸುದ್ದಿ