ಪಟಾಕಿ ಸಿಡಿದು ಬಿಜೆಪಿ ಸಂಸದೆಯ ಮೊಮ್ಮಗಳು ಸಾವು
17/11/2020
ಪ್ರಯಾಗ್ ರಾಜ್: ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿಯವರ ಪುತ್ರಿಯಾಗಿದ್ದ 8 ವರ್ಷದ ಮಗು ದೀಪಾವಳಿ ಪ್ರಯಕ್ತ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಳು. ಈ ವೇಳೆ ಈ ಘಟನೆ ನಡೆದಿದೆ.
ಪಟಾಕಿ ಸಿಡಿದ ಪರಿಣಾಮ ಬಾಲಕಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆಕೆಯನ್ನು ಏರ್ ಆಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕಿಯನ್ನು ಬದುಕಿಸಲು ವೈದ್ಯರು ಸತತ ಪ್ರಯತ್ನ ಮಾಡಿದ ಬಳಿಕವೂ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.