ಮಗು ಮಾರಾಟ ಮಾಡಲು ಬಿಡದ ಪತ್ನಿಯ ಮೇಲೆ ಪತಿಯಿಂದ ಘೋರ ಕೃತ್ಯ!
25/12/2020
ಬೆಂಗಳೂರು: ಮಗುವನ್ನು ಮಾರಾಟ ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯ ಜುಟ್ಟು ಹಿಡಿದು ರಸ್ತೆಯಲ್ಲಿಯೇ ಪತಿ ಹೊಡೆದಿರುವ ಘಟನೆ ನೆಲಮಂಗಲದ ಗಂಗಮ್ಮನ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ 6 ತಿಂಗಳ ಮಗುವನ್ನು ಯಾದಗಿರಿ ಮೂಲದ ಶರಣಪ್ಪ ಎಂಬಾತ ಮಾರಾಟ ಮಾಡಲು ಯತ್ನಿಸಿದ್ದಾನೆ. ಇದನ್ನು ನೋಡಿದ ತಾಯಿ ಲಕ್ಷ್ಮೀ ಪತಿಯನ್ನು ತಡೆದಿದ್ದಾಳೆ. ಇದರಿಂದ ಆಕ್ರೋಶಿತನಾದ ಶರಣಪ್ಪ ಆಕೆಯನ್ನು ರಸ್ತೆಯಲ್ಲಿಯೇ ಜುಟ್ಟು ಹಿಡಿದು ತೀವ್ರವಾಗಿ ಹೊಡೆದಿದ್ದಾನೆ.
ಪತಿಯ ಕಿರುಕುಳದಿಂದ ಬೇಸತ್ತ ಲಕ್ಷ್ಮೀ ಕೊನೆಗೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಗಂಗಮ್ಮನಗುಡಿ ಠಾಣೆ ಪೊಲೀಸರು ಪತಿ ಶರಣಪ್ಪನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯ ಕೃತ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.