ಪತ್ನಿ ಮಗುವಿಗೆ ಬೆಂಕಿ ಹಚ್ಚಿ ಬಾವಿಗೆ ಹಾರಿದ ಪಾಪಿ ಪತಿ: ಮೂವರ ದುರಂತ ಸಾವು
ಮಲಪ್ಪುರಂ: ಗೂಡ್ಸ್ ರಿಕ್ಷಾದಲ್ಲಿ ಪತ್ನಿ ಹಾಗೂ 5 ವರ್ಷದ ಮಗುವನ್ನು ಕೂಡಿ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿಯೋರ್ವ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಮಲಪ್ಪುರಂನ ಪೆರಿಂತಲ್ಮನ್ನಾ ಎಂಬಲ್ಲಿ ನಡೆದಿದೆ.
ಮಹಮ್ಮದ್ ಹಾಗೂ ಆತನ ಪತ್ನಿ ಜಾಸ್ಮಿನ್ ಮತ್ತು ಪುತ್ರಿ ಫಾತಿಮಾ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ವ್ಯಕ್ತಿಯೂ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದು, ತನ್ನ ಪತ್ನಿ ಹಾಗೂ ಮಗುವನ್ನು ಗೂಡ್ಸ್ ರಿಕ್ಷಾದಲ್ಲಿ ಕೂರಿಸಿ ಬೆಂಕಿ ಹಚ್ಚಿದ್ದು, ತನಗೂ ಬೆಂಕಿ ಹಚ್ಚಿಕೊಂಡಿದ್ದಾನೆ.
ಬೆಂಕಿ ಮೈಗೆ ಹತ್ತಿಕೊಳ್ಳುತ್ತಿದ್ದಂತೆಯೇ ನೋವು ಸಹಿಸಲಾಗದೇ ಮಹಮ್ಮದ್ ಸಮೀಪವೇ ಇರುವ ಬಾವಿಗೆ ಹಾರಿದ್ದಾನೆ ಎನ್ನಲಾಗಿದೆ. ಆದರೂ ಮೂವರು ಕೂಡ ದುರಂತ ಸಾವನ್ನಪ್ಪಿದ್ದಾರೆ.
ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪರಿಣಾಮ ಎರಡು ಬಾರಿ ರಿಕ್ಷಾ ಸ್ಫೋಟಿಸಿದ ಸದ್ದು ಕೇಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಮ್ಮದ್ ಯಾವ ಕಾರಣಕ್ಕೆ ಇಂತಹದ್ದೊಂದು ಕೃತ್ಯವನ್ನು ಎಸಗಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ.
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಯ ನಿರ್ಧಾರಗಳಿಂದ ದೂರವಿರಿ. ಮನಸ್ಸು ನಿಯಂತ್ರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ನೀವಿದ್ದರೆ, 9152987821 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಿರಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಿನ್ಯಾ ಗ್ರಾಮ ಪಂಚಾಯತ್ ನಿಂದ ದಲಿತರ ಕಡೆಗಣನೆ: ಪಂಚಾಯತ್ ಕಚೇರಿಯೆದುರು ಪ್ರತಿಭಟನೆ
ಕನ್ನಡ ಕೋಟ್ಯಾಧಿಪತಿಯಲ್ಲಿ ಸ್ಪರ್ಧಿಸಿದ್ದ ಲೈನ್ ಮೆನ್ ಆತ್ಮಹತ್ಯೆಗೆ ಶರಣು
ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು!