ಪತ್ನಿ ಅಗಲಿಕೆ ಚಿಂತೆ: ಮಣಿಪಾಲ‌ ಎಂಐಟಿ ಅಟೆಂಡರ್‌ ಸಾವಿಗೆ ಶರಣು - Mahanayaka
8:02 PM Wednesday 11 - December 2024

ಪತ್ನಿ ಅಗಲಿಕೆ ಚಿಂತೆ: ಮಣಿಪಾಲ‌ ಎಂಐಟಿ ಅಟೆಂಡರ್‌ ಸಾವಿಗೆ ಶರಣು

dakshina kannada
15/02/2023

ಮಣಿಪಾಲ: ಹೆಂಡತಿ ಅಗಲಿದ ಚಿಂತೆಯಲ್ಲಿ‌ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಮಣಿಪಾಲದ ಎಂಐಟಿಯಲ್ಲಿ ನಡೆದಿದೆ.

ಮೃತರನ್ನು‌ ಅಲೆವೂರಿನ ಮೂಡುಅಲೆವೂರು ಗ್ರಾಮದ ನಿವಾಸಿ ಕೃಷ್ಣಾನಂದ ಶೆಣೈ (50) ಎಂದು ಗುರುತಿಸಲಾಗಿದೆ. ಮಣಿಪಾಲ ಎಮ್‌ಐಟಿಯಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್‌ಆಗಿ ಕೆಲಸ ಮಾಡಿಕೊಂಡಿದ್ದರು.

8 ತಿಂಗಳ ಹಿಂದೆ ಇವರ ಹೆಂಡತಿ ಮೃತಪಟ್ಟಿದ್ದರು. ಆ ಬಳಿಕ ಕೃಷ್ಣಾನಂದ ಶೆಣೈ ಅವರು  ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಫೆ.14ರಂದು ತಾನು ಕೆಲಸ ಮಾಡುವ ಎಮ್ ಐಟಿಯ ಎಬಿ -1 ಬ್ಲಾಕ್ ‌ನ 2 ನೇ ಮಹಡಿ ರೂಮ್ ನಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ