ಪತಿಯನ್ನೇ ಕೊಲೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ - Mahanayaka
10:30 AM Thursday 12 - December 2024

ಪತಿಯನ್ನೇ ಕೊಲೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ

shobha
12/03/2022

ಧಾರವಾಡ: ತಾಲೂಕಿನ ಮರೇವಾಡ ಗ್ರಾಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆಯೋರ್ವರು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಈರಣ್ಣ ಕೊಲೆಯಾದ ವ್ಯಕ್ತಿ. ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ, ಮಗಳೊಂದಿಗೆ ಸೇರಿಕೊಂಡು ಪತಿ ಈರಣ್ಣನನ್ನ ಹತ್ಯೆ ಮಾಡಿರುವ ಆರೋಪಿಯಾಗಿದ್ದಾರೆ. ಈರಣ್ಣ ಕುಡಿದು ಬಂದು ಪತ್ನಿ ಮತ್ತು ಮಗಳೊಂದಿಗೆ ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಮಗಳೊಂದಿಗೆ ಸೇರಿಕೊಂಡು ಶೋಭಾ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣನನ್ನು ಹುಬ್ಬಳ್ಳಿಯ ಕಿಮ್ಸ್​ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಯ ಸರಪಂಚ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ ಉಗ್ರರು!

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ

ಪಾಕಿಸ್ತಾನದೊಳಗೆ ಆಕಸ್ಮಿಕವಾಗಿ ಉಡಾವಣೆಯಾದ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ!

ಬಿಜೆಪಿಗೆ ಹೇಗೆ ಮತ ಗಳಿಸಬೇಕು ಎಂದು ಗೊತ್ತಿದೆ: ರಾಕೇಶ್ ಟೀಕಾಯತ್ ಹೇಳಿಕೆ

ಇತ್ತೀಚಿನ ಸುದ್ದಿ