ಮದುವೆಯಾಗಿ ಎರಡೇ ದಿನದಲ್ಲಿ ಪತಿಯನ್ನು ಕಟ್ಟಿ ಹಾಕಿ ಪತ್ನಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ?
ಬೆಂಗಳೂರು: ಮದುವೆಯಾಗಿ ಎರಡೇ ದಿನದಲ್ಲಿ ಪತಿಯನ್ನು ಕಟ್ಟಿ ಹಾಕಿ ಪತ್ನಿ ರಾತ್ರೋ ರಾತ್ರಿ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದ್ದು, ಇಷ್ಟವಿಲ್ಲದ ಮದುವೆಯನ್ನು ಮುರಿದ ಯುವತಿ ತನಗೆ ಇಷ್ಟವಾದ ಯುವಕನ ಜೊತೆಗೆ ಬಿಹಾರದಿಂದ ಬೆಂಗಳೂರಿಗೆ ಬಂದು ಸೇರಿದ್ದಾಳೆ ಎಂದು ತಿಳಿದು ಬಂದಿದೆ.
ಅನುಕುಮಾರಿ ಈ ಪ್ರೇಮಕಥೆಯ ನಾಯಕಿ. ಈಕೆ ಆಶುಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೀತಿಸಿ ಮದುವೆಯಾಗುವುದನ್ನು ಅನುಕುಮಾರಿ ಮನೆಯಲ್ಲಿ ಒಪ್ಪಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಪಾಲಕರ ಮುಂದೆ ಗೋಗರೆದರೂ, ಅನುಕುಮಾರಿಗೆ ಬೇರೊಬ್ಬ ಯುವಕನೊಂದಿಗೆ ಪಾಲಕರು ಬಲವಂತವಾಗಿ ವಿವಾಹ ಮಾಡಿಸಿದ್ದಾರೆ.
ಮದುವೆಯಾದ ಎರಡನೇ ದಿನದಂದು ಪತಿ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ಅನುಕುಮಾರಿ ಆತನ ಕೈ ಕಾಲುಗಳನ್ನು ಕಟ್ಟಿ ಹಾಕಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಅಲ್ಲಿಂದ ತನ್ನ ಪ್ರಿಯಕರ ಆಶುಕುಮಾರ್ ನನ್ನು ಸುಲ್ತಾನ್ ಗಂಜ್ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾಗಿದ್ದು, ಅಲ್ಲಿಯೇ ಇಬ್ಬರು ಕೂಡ ವಿವಾಹವಾಗಿ ಹೊಸ ಜೀವನಕ್ಕಾಗಿ ಬೆಂಗಳೂರಿಗೆ ತೆರಳಿದ್ದಾರೆ. ಸದ್ಯ ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.