ಪತಿಯನ್ನು ಕೊಂದು ದೇಹದ ತುಂಡು ಟ್ಯಾಂಕ್‍ನಲ್ಲಿ ಬಚ್ಚಿಟ್ಟ ಪತ್ನಿ - Mahanayaka
1:27 PM Thursday 12 - December 2024

ಪತಿಯನ್ನು ಕೊಂದು ದೇಹದ ತುಂಡು ಟ್ಯಾಂಕ್‍ನಲ್ಲಿ ಬಚ್ಚಿಟ್ಟ ಪತ್ನಿ

bopalla crime
26/02/2022

ಭೋಪಾಲ್: ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು ಆತನ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಹಿಳೆಯನ್ನು ಸುನೀತಾ (40) ಎಂದು ಗುರುತಿಸಲಾಗಿದ್ದು, ತನ್ನ ಇಬ್ಬರು ಸ್ನೇಹಿತರಾದ ರಿಜ್ವಾನ್ ಖಾನ್ ಮತ್ತು ಭಯ್ಯೂ ಜೊತೆ ಸೇರಿ ತನ್ನ ಪತಿ ಬಬ್ಲು ಜಾಡೋನ್ ಹತ್ಯೆಗೈದಿದ್ದಾಳೆ. ಮೃತ ವ್ಯಕ್ತಿಯ ಪುತ್ರ ಪ್ರಶಾಂತ್ ಮದ್ಯದ ಅಮಲಿನಲ್ಲಿ ತನ್ನ ಸ್ನೇಹಿತರ ಬಳಿ ಈ ಬಗ್ಗೆ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.

ಫೆ. 6ರಂದು ಈ ಘಟನೆ ನಡೆದಿದ್ದು, ಸುನೀತಾ ಜಾಡೋನ್ ಊಟದಲ್ಲಿ ವಿಷವನ್ನು ಬೆರೆಸಿ ಬಬ್ಲು ಜಾಡೋನ್‍ಗೆ ನೀಡಿದ್ದಾಳೆ. ಇದರಿಂದ ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆ ತನ್ನ ಸ್ನೇಹಿತ ರಿಜ್ವಾನ್ ಜೊತೆ ಸೇರಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ನಗರದಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ ರಿಜ್ವಾನ್ ಮತ್ತು ಭಯ್ಯು ಬಬ್ಲು ಜಾಡೋನ್ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಶವದ ತುಂಡುಗಳನ್ನು ವಿವಿಧೆಡೆ ಎಸೆದಿದ್ದಾರೆ. ಆತನ ಕಾಲು ಮತ್ತು ಕೈಗಳನ್ನು ದೇವಾಸ್ ಅರಣ್ಯಪ್ರದೇಶದಲ್ಲಿ ಎಸೆದಿದ್ದು, ಸುನೀತಾ ಮುಂಡ ಮತ್ತು ತಲೆಯನ್ನು ಅವರ ಮನೆಯ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹೂತಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಮಗ ಪ್ರಶಾಂತ್ ಜೇಡನ್ ತನ್ನ ಸ್ನೇಹಿತನಿಗೆ ತನ್ನ ತಂದೆಯನ್ನು ಕೊಂದು ಹೂತಿಟ್ಟಿರುವುದಾಗಿ ತಿಳಿದಾಗ ವಿಷಯ ಬೆಳಕಿಗೆ ಬಂದಿದೆ. ಮತ್ತು ತನ್ನ ತಂದೆಯನ್ನು ತಾಯಿ ಕೊಂದ ಈ ವಿಚಾರ ಯಾರಿಗೂ ತಿಳಿದಿಲ್ಲ. 20 ದಿನಗಳ ಹಿಂದೆ ತಂದೆಯನ್ನು ಕೊಂದು ಶವವನ್ನು ಎಸೆದಿರುವುದಾಗಿ ಪ್ರಶಾಂತ್ ಜೇಡನ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಬೆಳಗ್ಗೆ ಸುನೀತಾ ಮತ್ತು ಪ್ರಶಾಂತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುನೀತಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆರೋಪಿಗಳಾದ ರಿಜ್ವಾನ್ ಮತ್ತು ಭಯ್ಯೂ ತಲೆಮರೆಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡ್ರ್ಯಾಗನ್‍ ನಿಂದ ಚುಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಉಕ್ರೇನ್‌ ಸೇನೆಯಿಂದ ರಷ್ಯಾದ ಇಬ್ಬರು ಸೈನಿಕರ ಸೆರೆ

ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವು

ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಬಿಜೆಪಿ ಮುಖಂಡನಿಂದ ದಲಿತ ಯುವಕನ ಹತ್ಯೆ: ಆರೋಪಿಯ ಬಂಧನಕ್ಕೆ ಸಿದ್ದರಾಮಯ್ಯ ಒತ್ತಾಯ

 

ಇತ್ತೀಚಿನ ಸುದ್ದಿ