ಪತಿಯನ್ನು ಬದುಕಿಸಲು ಪತ್ನಿಯ ಕೊನೆಯ ಪ್ರಯತ್ನ! | ಕಣ್ಣೀರು ಹಾಕಿದ ಸಾರ್ವಜನಿಕರು
ಆಗ್ರಾ: ಪತಿ ಪ್ರಾಣವಾಯುವಿಗಾಗಿ ತಡಕಾಡುತ್ತಿದ್ದ. ಅದೊಂದು ಆಸ್ಪತ್ರೆಗೆ ಹೋಗೋ ಆತನನ್ನು ಪತ್ನಿ ಕರೆದುಕೊಂಡು ಬಂದಿದ್ದಾಳೆ. ಆದರೆ, ಆಸ್ಪತ್ರೆಯ ಅಂಗಣಕ್ಕೆ ಬಂದಾಗಲೂ ಆಕ್ಸಿಜನ್ ಸಿಗಲಿಲ್ಲ. ಈ ವೇಳೆ ಪತ್ನಿಯ ಏನು ಮಾಡಬೇಕು ಎನ್ನುವುದು ತೋಚದೇ ಮಾಡಿದ ಆ ಒಂದು ಕಾರ್ಯ ಎಲ್ಲರ ಕಣ್ಣ ತೇವವಾಗಿಸಿದೆ.
ಹೌದು.. ಈ ಘಟನೆ ನಡೆದಿದ್ದು, ಶ್ರೀರಾಮನ ಹೆಸರು ಹೇಳಿಕೊಂಡು ಮತ ಪಡೆಯುತ್ತಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ವಿರುವ ಉತ್ತರ ಪ್ರದೇಶದಲ್ಲಿ. ಇಲ್ಲಿನ ಎಸ್ ಎನ್ ಎಂ ಮೆಡಿಕಲ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ದಾರುಣ ಸ್ಥಿತಿ ನಡೆದಿದೆ.
ಕೊರೊನಾ ಸೋಂಕಿತ 45 ವರ್ಷ ವಯಸ್ಸಿನ ಪತಿ ರವಿ ಸಿಂಘಾಲ್ ಅವರನ್ನು ಅವರ ಪತ್ನಿ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಕ್ಸಿಜನ್ ಇಲ್ಲದ ಕಾರಣ ಅವರನ್ನು ಆಸ್ಪತ್ರೆ ಅಂಗಣದಲ್ಲಿಯೇ ಇರಿಸಲಾಗಿತ್ತು.
ಕ್ಷಣಗಳು ಉರುಳುತ್ತಿದ್ದಂತೆಯೇ ಪತಿ ಉಸಿರಾಡಲು ಸಾಧ್ಯವಾಗದೇ ಸಾವಿನ ದವಡೆಗೆ ಹೋಗುತ್ತಿರುವುದನ್ನು ಕಂಡು ಏನು ಮಾಡಬೇಕು ಎಂದು ತೋಚದೇ ಪತ್ನಿ ಆತಂಕಿತಳಾಗಿದ್ದು, ಆಕ್ಸಿಜನ್ ಬರುವವರೆಗೆಯಾದರೂ ಪತ್ನಿಗೆ ಉಸಿರು ನೀಡಬೇಕು ಎಂದು ಕೊರೊನಾದ ಭಯವನ್ನು ಬಿಟ್ಟು, ತನ್ನ ಪತಿಯ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಲು ಪ್ರಯತ್ನಿಸಿದ್ದಾಳೆ.
ಪತ್ನಿಯ ಕೊನೆಯ ಪ್ರಯತ್ನವನ್ನು ಸ್ಥಳದಲ್ಲಿದ್ದವರು ಫೋಟೋ ತೆಗೆದುಕೊಂಡಿದ್ದು, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಯಾರ ಮೇಲೆ ಆಕ್ರೋಶ ತೋರಿಸಬೇಕು ಎನ್ನುವುದೇ ತಿಳಿಯದೇ ಜನರು ತಮ್ಮ ಕಣ್ಣುಗಳನ್ನು ಒರೆಸಿಕೊಳ್ಳುವಂತಾಗಿದೆ.