ಪತಿಯೇ ಪತ್ನಿಯನ್ನು ನದಿಗೆ ತಳ್ಳಿದನೇ? | ಪತಿಯನ್ನು ಹಿಂಬಾಳಿಸಿ ಹೋದವಳು ಮರಳಿ ಬರಲಿಲ್ಲ! - Mahanayaka
10:23 AM Monday 23 - December 2024

ಪತಿಯೇ ಪತ್ನಿಯನ್ನು ನದಿಗೆ ತಳ್ಳಿದನೇ? | ಪತಿಯನ್ನು ಹಿಂಬಾಳಿಸಿ ಹೋದವಳು ಮರಳಿ ಬರಲಿಲ್ಲ!

hasana
08/08/2021

ಹಾಸನ: ಸೇತುವೆಯ ಮೇಲಿನಿಂದ ನೀರಿಗೆ ಬಿದ್ದು ಮೃತಪಟ್ಟ ಮಹಿಳೆಯ ಸಾವು ಹತ್ಯೆ ಎಂದು ಪೋಷಕರು ಆರೋಪಿಸಿದ್ದು, ಅಳಿಯ ನಮ್ಮ ಪುತ್ರಿಯನ್ನು ನೀರಿಗೆ ತಳ್ಳಿ ಹತ್ಯೆ ಮಾಡಿರುವುದಾಗಿ ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಆಗಸ್ಟ್ 5ರಂದು ಹಾಸನ ಜಿಲ್ಲೆ ಸಕಲೇಶಪುರ ಸೇತುವೆಯ ಮೇಲಿನಿಂದ ನೀರಿಗೆ ಬಿದ್ದು 22 ವರ್ಷ ವಯಸ್ಸಿನ ಮಹಿಳೆ ಪೂಜಾ ಮೃತಪಟ್ಟಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು. ಮಗಳ ಮೃತದೇಹವನ್ನು ಕಂಡು ಪೋಷಕರು ಕಣ್ಣೀರಾಗಿದ್ದಾರೆ.

ಪೂಜಾಳ ಸಾವಿಗೂ ಕೆಲವು ದಿನಗಳ ಮುಂದೆ, ವರದಕ್ಷಿಣೆ ವಿಚಾರವಾಗಿ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಪೂಜಾ ತನ್ನ ಮನೆಯವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳು ಎಂದು ವರದಿಯಾಗಿದೆ. ಇದೇ ವಿಚಾರವನ್ನು ಮಾತನಾಡಲು ಪೂಜಾಳ ಪತಿ ಅಶ್ವತ್ಥ್ ಮನೆಗೆ ಬಂದಿದ್ದಾರೆ.

ಪೂಜಾಳ ಮನೆಯವರು ಬರುತ್ತಿರುವುದನ್ನು ಗಮನಿಸಿದ ಅಶ್ವತ್ಥ್ ಮನೆ ಬಿಟ್ಟು ಓಡಿಹೋಗಿದ್ದಾನೆ. ಆತ ಓಡಿ ಹೋಗುವುದನ್ನು ಕಂಡು ಪತ್ನಿಯೂ ಆತನ ಹಿಂದೆಯೇ ಹೋಗಿದ್ದಳು. ಆ ಬಳಿಕ ಪೂಜಾ ವಾಪಸ್ ಬಂದಿರಲಿಲ್ಲ. ಪತಿಯೇ ಆಕೆಯನ್ನು ನದಿಗೆ ತಳ್ಳಿ ಹಾಕಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಚೆಕ್ಕ ಗ್ರಾಮದ ಪೂಜಾ ಹಾಗೂ ಸಕಲೇಶಪುರ ತಾಲೂಕಿನ ರಾಮನ ಹಳ್ಳಿ ಗ್ರಾಮದ ಅಶ್ವತ್ಥ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕ  ಅಶ್ವತ್ಥ್, ಪೂಜಾ ಜೊತೆಗೆ ಒರಟಾಗಿ ವರ್ತಿಸಲು ಆರಂಭಿಸಿದ್ದ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಇಲ್ಲ: ಗುಡ್ಡದಲ್ಲಿ ಟೆಂಟ್ ಹಾಕಿ ಕುಳಿತ ಹೆಣ್ಣು ಮಕ್ಕಳು!

ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್

ಡಾಮಿನೊಸ್ ಪಿಜ್ಜಾ ಮಳಿಗೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ ಮ್ಯಾನೇಜರ್ ಅರೆಸ್ಟ್

ನೋಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಮೂರು ಅಂತಸ್ತಿನ ಹೊಟೇಲ್ ಕಟ್ಟಡ!

ಟೋಕಿಯೋ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

ಕೊರೊನಾ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ | ಪ್ರಧಾನಿ ಮೋದಿ

ಇತ್ತೀಚಿನ ಸುದ್ದಿ