ಪತ್ನಿ, ಅತ್ತೆಯನ್ನು ಮಚ್ಚಿನಿಂದ ಹೊಡೆದು ಕೊಂದ ಪಾಪಿ! - Mahanayaka
8:24 AM Thursday 12 - December 2024

ಪತ್ನಿ, ಅತ್ತೆಯನ್ನು ಮಚ್ಚಿನಿಂದ ಹೊಡೆದು ಕೊಂದ ಪಾಪಿ!

ravi kumar
22/02/2022

ಬೆಂಗಳೂರು: ಪತ್ನಿ ಹಾಗೂ ಅತ್ತೆಯನ್ನು ಮಚ್ಚಿನಿಂದ ಹೊಡೆದು ಕೊಂದು ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಪತ್ನಿ ಸಾವಿತ್ರಿ, ಅತ್ತೆ ಸರೋಜಮ್ಮ ಎಂಬವರು ಹತ್ಯೆಗೀಡಾದವರು ಎಂದು ಗುರುತಿಸಲಾಗಿದ್ದು, ರವಿಕುಮಾರ್ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ರಾತ್ರಿ ಕೂಡ ಇವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.  ಮಂಗಳವಾರ ಮತ್ತೆ ಜಗಳನ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.

ಪತ್ನಿಯ ಮೇಲಿನ ಸಿಟ್ಟಿನಿಂದ ರವಿ ಕುಮಾರ್ ಎಳನೀರು ಕೊಚ್ಚುವ ಮಚ್ಚಿನಿಂದ ಪತ್ನಿಗೆ ಹೊಡೆದಿದ್ದು,  ತಡೆಯಲು ಬಂದ ಅತ್ತೆಯ ಮೇಲೆ ಕೂಡ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೃತ್ಯದ ಬಳಿಕ ಆರೋಪಿ ರವಿಕುಮಾರ್ ಗೋವಿಂದರಾಜನಗರ ಪೊಲೀಸರ ಮುಂದೆ ಶರಣಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.  ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಿ ಕೃತ್ಯ:

ಸೋಮವಾರ ರಾತ್ರಿ ಗಲಾಟೆ ನಡೆದ ಬಳಿಕ, ಮಂಗಳವಾರ ಬೆಳಗ್ಗೆ ಮಕ್ಕಳಿಬ್ಬರನ್ನು‌ ಶಾಲೆಗೆ ಕಳುಹಿಸಿದ್ದ ರವಿ ಕುಮಾರ್, ಪತ್ನಿಯೊಂದಿಗೆ ಮತ್ತೆ ಗಲಾಟೆ ಶುರು ಮಾಡಿದ್ದು, ಪತ್ನಿಯನ್ನು ಹತ್ಯೆ ಮಾಡಿದ್ದು, ತಡೆಯಲು ಬಂದ ಅತ್ತೆಯನ್ನೂ ಹತ್ಯೆ ನಡೆಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆರ್.ಜೆ.ರಚನಾ ಹೃದಯಾಘಾತದಿಂದ ನಿಧನ

ಬುರ್ಖಾ ಧರಿಸಿದವರಿಗೆ ಥಳಿತ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತು ಬಯಲು

ತನ್ನನ್ನು ಸಿಂಹಕ್ಕೆ ಹೋಲಿಸಿಕೊಂಡ ಸಚಿವ ಈಶ್ವರಪ್ಪ!

ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ: ಪ್ರಕರಣ ದಾಖಲು

ಹಿಜಾಬ್ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯ ತಂದೆಯ ರೆಸ್ಟೋರೆಂಟ್ ಮೇಲೆ ತಂಡದಿಂದ ದಾಳಿ

 

ಇತ್ತೀಚಿನ ಸುದ್ದಿ