ಪತ್ನಿ ಹಾಗೂ ತನ್ನ ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ಪರಾರಿಯಾದ ಪತಿ! - Mahanayaka

ಪತ್ನಿ ಹಾಗೂ ತನ್ನ ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ಪರಾರಿಯಾದ ಪತಿ!

chathrpur
07/06/2021

ಛತರ್ ಪುರ: ಪತ್ನಿ ಗಂಡು ಮಗುವನ್ನು ಹೆರಲಿಲ್ಲ ಎಂದು ಕೋಪಗೊಂಡ ಪತಿಯೋರ್ವ ತನ್ನ ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು  ಬಾವಿಗೆ ದೂಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಛತರ್ ಪುರದಲ್ಲಿ ಭಾನುವಾರ ಸಂಜೆ ನಡೆದಿದೆ.

ತವರು ಮನೆಯಲ್ಲಿದ್ದ ಪತ್ನಿ ಮತ್ತು ಹೆಣ್ಣು ಮಕ್ಕಳನ್ನು  ತನ್ನ ಊರಿಗೆ ಕರೆತಂದ ಪತಿ, ತನ್ನ ಮನೆಯ ದಾರಿ ಮಧ್ಯೆ ಬೈಕ್ ನಿಲ್ಲಿಸಿ ತೆರೆದ ಬಾವಿಯೊಂದಕ್ಕೆ  ಪತ್ನಿ ಹಾಗೂ ಮಕ್ಕಳನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದ ಪೊಲೀಸರು ತಿಳಿಸಿದ್ದಾರೆ.

ಬಾವಿಗೆ ಬಿದ್ದ ಪತ್ನಿಯು ತನ್ನ  ಮೂರು ತಿಂಗಳ ಹೆಣ್ಣು ಮಗುವನ್ನು ಹೊತ್ತುಕೊಂಡು ಹರಸಾಹಸ ಪಟ್ಟು ಬಾವಿಯಿಂದ ಮೇಲೆ ಬಂದಿದ್ದಾರೆ. ಅವರ ಹಿರಿಯ ಮಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಬಳಿಕ ಸ್ಥಳೀಯರ ನೆರವಿನೊಂದಿಗೆ  ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ವ್ಯಕ್ತಿ ಹಲವು ಸಮಯಗಳಿಂದ ತನ್ನ ಪತ್ನಿ ಮತ್ತು ಹೆಣ್ಣು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಾಧ್ಯಮಗಳಿಗೆ ಎಸ್ ಐ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಶೋಧ ನಡೆಸುತ್ತಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆಯ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಇತ್ತೀಚಿನ ಸುದ್ದಿ