ಪತ್ನಿ ಸಾವಿಗೀಡಾಗಿ ಮತ್ತೊಂದು ಮದುವೆಯಾದ | ಮದುವೆಯಾಗಿ 15 ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ!
27/02/2021
ಚಿಕ್ಕಬಳ್ಳಾಪುರ: 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಂತಾಮಣಿ ತಾಲೂಕಿನ ಬ್ರಾಹ್ಮಣರ ಹಳ್ಳಿಯಲ್ಲಿ ನಡೆದಿದೆ.
35 ವರ್ಷ ವಯಸ್ಸಿನ ರವಿಹಾಗೂ 9ತಿಂಗಳ ಮಗು ಸುಷ್ಟಗಂಗಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇಂದು ಬೆಳಗ್ಗೆ ಕೃಷಿ ಹೊಂಡದ ಬಳಿ ಕಾರು ಕಂಡು ಬಂದಿದ್ದು, ಇದರಿಂದ ಅನುಮಾನಗೊಂಡ ಸ್ಥಳೀಯರು ಸಮೀಪ ಹೋಗಿ ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ.
3 ತಿಂಗಳ ಹಿಂದೆ ಅನಾರೋಗ್ಯದಿಂದ ರವಿ ಎಂಬುದರ ಹೆಂಡತಿ ಮೃತಪಟ್ಟಿದ್ದರು.15ದಿನಗಳ ಹಿಂದೆ ಬೇರೆ ಮದುವೆ ಸಹ ಆಗಿದ್ದ ರವಿ ಕಳೆದ ರಾತ್ರಿಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.
ಹೊಂಡದ ಬಳಿ ಕಾರು ಕಂಡುಬಂದ ಕಾರಣ ರವಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕೆ ವ್ಯಕ್ತವಾಗಿತ್ತು.