ಮನೆ ಬಿಟ್ಟು ಹೋದ ಪತ್ನಿ ವಾಪಾಸ್ಸು ಬರುವಂತೆ ಪತಿಯ ಮನವಿ
ಉಡುಪಿ: ಕಳೆದ 10 ತಿಂಗಳಿನಿಂದ ಮನೆ ಬಿಟ್ಟು ಹೋಗಿರುವ ನನ್ನ ಪತ್ನಿ ಆಶಾ(35) ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾಳೆ. ಮಕ್ಕಳು ಆಕೆ ಇಲ್ಲದೆ ಚಿಂತೆಯಲ್ಲಿದ್ದಾರೆ. ಆಕೆಗೆ ಯಾರೇ ಆಶ್ರಯ ನೀಡಿದ್ದರೂ ತಕ್ಷಣವೇ ನನಗೆ ಮಾಹಿತಿ ನೀಡಬೇಕೆಂದು ಬೆಳಪುವಿನ ಸುಬ್ರಹ್ಮಣ್ಯ(42) ಮನವಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೆಸ್ತ್ರಿ ಕೆಲಸ ಮಾಡಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕಾಗಿ ಮನಸ್ತಾಪಗೊಂಡ ಪತ್ನಿ ಆಶಾ, ಕಳೆದ ಡಿಸೆಂಬರ್‌ನಲ್ಲಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ದೊಡ್ಡ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬಳಿಕ ಆಕೆ ಠಾಣೆಗೆ ಬಂದು ಹಾಜರಾಗಿದ್ದಳು ಎಂದರು.
ಇದೀಗ ಆಕೆ ಮತ್ತೆ ಮನೆ ತೊರೆದು ಹೋಗಿದ್ದಾಳೆ. ಅವಳು ಎಲ್ಲಿಯೋ ಕೆಲಸ ಮಾಡಿಕೊಂಡು ಯಾರದ್ದೋ ಆಶ್ರಯದಲ್ಲಿ ವಾಸವಾಗಿದ್ದಾಳೆ. ಆದುದರಿಂದ ಆಶ್ರಯ ನೀಡಿದವರು ತಕ್ಷಣ ನನಗೆ ಮಾಹಿತಿ ನೀಡಬೇಕು. ಮಕ್ಕಳಿಗೋಸ್ಕರ ಆಕೆ ಮನೆ ವಾಪಾಸ್ಸು ಬರಲಿ ಎಂದು ಅವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka