ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ, ಹಲ್ಲೆ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್! - Mahanayaka
1:12 AM Wednesday 11 - December 2024

ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ, ಹಲ್ಲೆ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್!

arrest
17/09/2021

ಡಿಯೋರಿಯಾ: ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕಿರುಕುಳಕ್ಕೆ ಯತ್ನಿಸಿ, ಆಕೆಗೆ ಥಳಿಸಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೋರ್ವನನ್ನು  ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆದರಿಸಿ ಪತ್ನಿಗೆ ಹಲ್ಲೆ ನಡೆಸುತ್ತಿದ್ದು, ಆತನ ಆಸೆ ಈಡೇರದಿದ್ದಾಗ ನಾನಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾಳೆ.

ಉತ್ತರ ಪ್ರದೇಶದ ಗೋರಾಖ್ ಪುರ ಜಿಲ್ಲೆಯ ರಾಂಪುರ ಕಾರ್ಖಾನಾ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ವಿಜಯ್ ತಿವಾರಿ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ದೈಹಿಕ, ಮಾನಸಿಕ ಹಾಗೂ ಆರ್ಥಿಕ ಕಿರುಕುಳ ನೀಡಿರುವ ಬಗ್ಗೆ ಈತನ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.

2014ರಲ್ಲಿ ಇವರಿಬ್ಬರ ಮದುವೆಯಾಗಿತ್ತು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಪತಿಯ ವರ್ತನೆ ಬದಲಾಗಿದೆ. ಆತ ಅಸಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಒಪ್ಪಿಕೊಳ್ಳದಿದ್ದರೆ, ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವರ್ತನೆಯನ್ನು 2017ರಲ್ಲಿಯೂ ಈತ ತೋರಿದ್ದು, ಪತ್ನಿಯನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿದ್ದ. ಈ ವೇಳೆ ಕುಟುಂಬದ ಸದಸ್ಯರು  ಮಧ್ಯಪ್ರವೇಶಿಸಿ ಪಂಚಾಯತ್ ನಡೆಸಿ ಮತ್ತೆ ಸಂತ್ರಸ್ತೆಯನ್ನು ಪತಿಯ ಮನೆಗೆ ಕಳುಹಿಸಿದ್ದರು. ಇದಾದ ಬಳಿಕ ಆರೋಪಿಯು 20 ಲಕ್ಷ ರೂಪಾಯಿ ತರುವಂತೆ ಪತ್ನಿಗೆ ಬೇಡಿಕೆಯಿಟ್ಟಿದ್ದು, ಇದಾದ ಬಳಿಕ ಇವರಿಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಸದ್ಯ ಆರೋಪಿಯ ವಿರುದ್ಧ ರಾಂಪುರ ಕಾರ್ಖಾನಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಎಂಬವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ

ತಲೆಗೆ ಗುಂಡು ಹಾರಿಸಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ: ಆತ್ಮಹತ್ಯೆಯೋ?, ಕೊಲೆಯೋ? ಎಂಬ ಶಂಕೆ!

ಕ್ಲಬ್ ಹೌಸ್ ಹೌಸ್ ನಲ್ಲಿ ಇಂದು ಪ್ರಧಾನಿ ಮೋದಿ ಜನ್ಮ ದಿನಾಚರಣೆ: ಸಂಸದ ಪ್ರತಾಪ್ ಸಿಂಹ ಭಾಷಣ

ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿ | ದೇವದಾಸ್ ಕಾಪಿಕಾಡ್ ಒತ್ತಾಯ

ದೇವಾಲಯ ತೆರವು: ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ

2023ರಲ್ಲಿ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ: ಹೆಚ್.ಡಿ.ದೇವೇಗೌಡ ಗುಡುಗು

ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು!

ಇತ್ತೀಚಿನ ಸುದ್ದಿ