ಪತ್ನಿಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿ ಬಂದ ಪತಿ: ಬೆಚ್ಚಿಬಿದ್ದ ವೈದ್ಯರು! - Mahanayaka
5:07 AM Wednesday 11 - December 2024

ಪತ್ನಿಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿ ಬಂದ ಪತಿ: ಬೆಚ್ಚಿಬಿದ್ದ ವೈದ್ಯರು!

snek
26/06/2022

ಉತ್ತರಪ್ರದೇಶ:  ವ್ಯಕ್ತಿಯೋರ್ವನ ಪತ್ನಿಗೆ ಹಾವು ಕಚ್ಚಿದ್ದು, ಈ ವೇಳೆ ಯುವಕ ಹಾವಿನ ಸಮೇತ ಪತ್ನಿತನ್ನು ಆಸ್ಪತ್ರೆಗೆ ಕರೆತಂದ ಘಟನೆ ಉತ್ತರ ಪ್ರದೇಶದ ಮಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕಿತ್ಸೆ ನೀಡಲು ಬಂದ ವೈದ್ಯರು ಯುವಕನ ಕೈಯಲ್ಲಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದು, ಹಾವನ್ನು ಏಕೆ ತಂದಿರಿ ಎಂಬ ಪ್ರಶ್ನೆಗೆ ಯುವಕ  ನೀಡಿದ ಉತ್ತರ ವೈದ್ಯರ ಅಚ್ಚರಿಗೆ ಕಾರಣವಾಗಿತ್ತು.

ವೈದ್ಯರು ಯಾವ ಹಾವು ಕಚ್ಚಿದೆ ಎಂದು ಕೇಳಿದಾಗ, ತೋರಿಸಲು ಹಾವನ್ನು ಹಿಡಿದು ಬಾಟಲಿಯಲ್ಲಿ ತಂದಿರುವುದಾಗಿ ಯುವಕ ಹೇಳಿದ್ದಾನೆ.

ರಾಮೇಂದ್ರ ಯಾದವ್ ಎಂಬತನ ಪತ್ನಿಗೆ ಹಾವು ಕಚ್ಚಿದ್ದು,  ಹಾವು ಕಚ್ಚಿದ ತಕ್ಷಣವೇ ಹಾವನ್ನು  ಬಾಟಲಿಯೊಳಗೆ ತುಂಬಿಸಿದ ಆತ,  ಪತ್ನಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ್ದಾನೆ.

ಇನ್ನೂ ಬಾಟಲಿಯಲ್ಲಿ ಸಣ್ಣ ರಂಧ್ರಗಳನ್ನು ಮಾಡಲಾಗಿದ್ದು, ಹಾವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ. ತನ್ನ ಪತ್ನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೇ ಹಾವನ್ನು ಕಾಡಿಗೆ ಬಿಡಲಾಗುವುದು ಎಂದು ಯುವಕ ಹೇಳಿಕೊಂಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಗುಚಿ ಬಿದ್ದ ಬೈಕ್ ಗೆ ಹತ್ತಿಕೊಂಡ ಬೆಂಕಿ: ಇಬ್ಬರು ಸವಾರರಿಗೆ ತೀವ್ರ ಗಾಯ

ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬಿಎಸ್ ಪಿ ಬೆಂಬಲ

ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜರ್ಮನಿಗೆ!

ತರಕಾರಿ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್

ಹಳ್ಳದಲ್ಲಿ ತೇಲಿ ಬಂದ ನಾಲ್ಕು ನವಜಾತ ಶಿಶುಗಳ ಮೃತದೇಹ!

ಇತ್ತೀಚಿನ ಸುದ್ದಿ