ಪತ್ನಿಯ ಅಧಿಕಾರ ಚಲಾಯಿಸುತ್ತಿರುವ ಗಂಡ: ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಆಕ್ರೋಶ
ಚಿತ್ರದುರ್ಗ: ಮಹಿಳೆಯರು ಸಬಲರಾಗಬೇಕು ಎಂದು ಚುನಾವಣೆಯಲ್ಲಿ ಕೂಡ ಮಹಿಳಾ ಮೀಸಲು ಕ್ಷೇತ್ರಗಳನ್ನು ಮಾಡಲಾಗುತ್ತಿದೆ. ಆದರೆ, ಮಹಿಳೆಯರು ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಪತಿಯೇ ದರ್ಬಾರ್ ನಡೆಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಿದರೆಕೆರೆ ಗ್ರಾಮ ಪಂಚಾಯುತ್ ಅಧ್ಯಕ್ಷೆ ಪುಷ್ಪ ಅವರಿ ಮಹಿಳಾ ಮೀಸಲು ಕ್ಷೇತ್ರದಿಂದ ಗೆದ್ದು ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಅವರ ಪತಿ ಸಚಿನ್ ಆಡಳಿತ ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಇದೀಗ ಕೇಳಿ ಬಂದಿವೆ.
ಮನೆ ಮಂಜೂರು, ಕಾಮಗಾರಿ ವಿಚಾರಗಳಲ್ಲಿ ಸೇರಿದಂತೆ ಪಂಚಾಯತ್ ನ ಸಭೆ ಸಮಾರಂಭಗಳಲ್ಲಿ ಈತ ಹೇಳಿದ್ದೇ ನಡೆಯುತ್ತದೆ. ತನ್ನ ಪತ್ನಿಯ ಅಧಿಕಾರವನ್ನು ಈತನೇ ಚಲಾಯಿಸುತ್ತಿರುವುದರ ವಿರುದ್ಧ ಗ್ರಾಮಸ್ಥರು ಇದೀಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ವಿಚಾರವನ್ನು ಜಿ.ಪಂ. ಸಿಇಒ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದ್ದು, ಸಚಿನ್ ಬಿಜೆಪಿ ಶಾಸಕ ಚಂದ್ರಪ್ಪನವರ ಬೆಂಬಲಿಗರಾಗಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಅಧಿಕಾರಿಗಳಿಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇನ್ನೂ ಪಂಚಾಯತ್ ಆಡಳಿತದಲ್ಲಿ ಸಚಿನ್ ದರ್ಬಾರ್ ನಿಲ್ಲಿಸಬೇಕು. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಪತಿಗೆ ಆಡಳಿತ ನಡೆಸಲು ಅವಕಾಶ ನೀಡಿರುವ ಪುಷ್ಪಾ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ
ಶಾಲೆ ಸರಸ್ವತಿ ಮಂದಿರ, ತಾಲಿಬಾನ್ ಮಾಡಲು ಬಿಡುವುದಿಲ್ಲ: ನಳಿನ್ ಕುಮಾರ್ ಕಟೀಲ್
ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ | ತಾಲೂಕು ಅಭ್ಯಾಸ ವರ್ಗ-2022
ಜೈಲಿನಂತೆ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಗೋಡೆ ನಿರ್ಮಾಣದ ಯತ್ನ: ಮುನೀರ್ ಕಾಟಿಪಳ್ಳ
ಕೌಟುಂಬಿಕ ಹಿಂಸಾಚಾರ ಆರೋಪ: ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ಪೆರು ಪ್ರಧಾನಿ ವಜಾ