ಪತ್ನಿಯ ಜೊತೆಗೆ ಮಲಗಿದ್ದ 12 ವರ್ಷದ ಪುತ್ರಿಯ ಮೇಲೆ ನೀಚ ಕೃತ್ಯ ನಡೆಸಿದ ಸ್ವಂತ ತಂದೆ - Mahanayaka
10:38 AM Wednesday 15 - January 2025

ಪತ್ನಿಯ ಜೊತೆಗೆ ಮಲಗಿದ್ದ 12 ವರ್ಷದ ಪುತ್ರಿಯ ಮೇಲೆ ನೀಚ ಕೃತ್ಯ ನಡೆಸಿದ ಸ್ವಂತ ತಂದೆ

08/12/2020

ಭೋಪಾಲ್: 45 ವರ್ಷದ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ನಡೆದಿದ್ದು, ತಾಯಿಯ ಜೊತೆಗೆ ಮಗಳು ಮಲಗಿದ್ದ ಸಂದರ್ಭದಲ್ಲಿಯೇ ಪತಿ ಈ ನೀಚ ಕೃತ್ಯಕ್ಕೆ ಮುಂದಾಗಿದ್ದಾನೆ.

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈತನಿಗೆ 17, 15 ಮತ್ತು 12 ವರ್ಷದ ಹೆಣ್ಣುಮಕ್ಕಳಿದ್ದಾರೆ.  ತನ್ನ ತಾಯಿಯ ಜೊತೆಗೆ ಮಲಗಿದ್ದ ಕೊನೆಯ ಮಗಳ ಮೇಲೆ ಅತ್ಯಾಚಾರ ನಡೆಸಲು ಈತ ಯತ್ನಿಸಿದ್ದಾನೆ.  ತಡರಾತ್ರಿ ಕಿರಿಯ ಮಗಳ ಪಕ್ಕಕ್ಕೆ ಬಂದು ಮಲಗಿದ್ದ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಗಾಬರಿಯಿಂದ ಕಿರುಚಿದ್ದು, ಇದರಿಂದಾಗಿ ಘಟನೆ ತಾಯಿಗೆ ತಿಳಿದಿದೆ.


ADS

ಮಗಳ ಕಿರುಚಾಟದ ಸದ್ದಿಗೆ ಎಚ್ಚರಗೊಂಡ ಪತ್ನಿ ಮಗಳನ್ನು ವಿಚಾರಿಸಿದ್ದು, ಈ ವೇಳೆ ಆಕೆ ನಡೆದ ವಿಚಾರ ತಿಳಿಸಿದ್ದಾಳೆ. ಆಕೆ ಈ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲಿಸಿದ್ದಾಳೆ. ಪುತ್ರಿ ಕಿರುಚುತ್ತಿದ್ದಂತೆಯೇ ನೀಚ ತಂದೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನೂ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಂದೆಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯು ಇದೀಗ ಹೆಣ್ಣು ಮಕ್ಕಳ ಸುರಕ್ಷತೆಗೆ ಹೊಸ ಸವಾಲಾಗಿ ಪರಿಣಮಿಸಿದೆ.


ಇತ್ತೀಚಿನ ಸುದ್ದಿ