ಮೃತದೇಹ ಸಾಗಿಸಲು ಹಣವಿಲ್ಲ: ಪತ್ನಿಯ ಮೃತದೇಹ ಹೊತ್ತು 33 ಕಿ.ಮೀ. ನಡೆದ ಪತಿ
ಭುವನೇಶ್ವರ್: ಪತ್ನಿಯ ಮೃತದೇಹ ಸಾಗಿಸಲು ಹಣವಿಲ್ಲದ ಪತಿ, ಯಾರ ಸಹಾಯವೂ ಸಿಗದ ಹಿನ್ನೆಲೆಯಲ್ಲಿ ಹೆಗಲಲ್ಲಿಯೇ ಮೃತದೇಹವನ್ನು ಹೊತ್ತು ಸುಮಾರು 33 ಕಿ.ಮೀ. ದೂರ ನಡೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಒಡಿಶಾದ ಕೊರಪಟ್ ಜಿಲ್ಲೆಯ ಪೊಟ್ಟಾಂಗಿ ಏರಿಯಾದ ನಿವಾಸಿಗಳಾದ ಗುರು ಮತ್ತು ಆತನ ಪತ್ನಿ, ಆಂಧ್ರದ ವಿಶಾಖಪಟ್ಟಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಕೆಲವು ದಿನಗಳ ಹಿಂದಷ್ಟೇ ಆಕೆಯನ್ನು ಸಾಗರ್ಬಾಲ್ಸಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಪತ್ನಿಯ ಅಂತ್ಯಕ್ರಿಯೆ ಗಾಗಿ ಆಕೆಯ ಮೃತದೇಹವನ್ನು ಊರಿಗೆ ಸಾಗಿಸಲು ನೆರವು ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಆತ ತೀವ್ರ ಮನವಿ ಮಾಡಿದರೂ ಯಾರ ಹೃದಯವೂ ಕರಗಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ಯಾರ ಸಹಾವಿಲ್ಲದಿದ್ದರೇನು ಎಂದು ಪತ್ನಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ಪತಿ ನಡೆದಿದ್ದಾನೆ.
ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಪತಿ ನಡೆಯುತ್ತಿದ್ದರೆ, ಈ ದೃಶ್ಯವನ್ನು ನೋಡಿಕೊಂಡು ಮನರಂಜನೆ ಪಡೆದವರೇ ಹೆಚ್ಚು, ಯಾರು ಕೂಡ ಈತನಿಗೆ ನೆರವಾಗಲಿಲ್ಲ. ಜಾತಿ, ಧರ್ಮಗಳ ಪಾವಿತ್ರ್ಯತೆ ಬಗ್ಗೆ ನಮ್ಮ ಸಮಾಜದಲ್ಲಿ ಸಾಕಷ್ಟು ಜನರು ಕೊಚ್ಚಿಕೊಳ್ಳುತ್ತಾರೆ. ಆದ್ರೆ, ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದರೆ, ಅವರ ನೆರವಿಗೆ ಯಾರೂ ನಿಲ್ಲುವುದಿಲ್ಲ ಅನ್ನೋದು ವಾಸ್ತವ. ಪತ್ನಿಯ ಮೃತದೇಹಕ್ಕೆ ಪತಿಯ ಹೆಗಲೇ ಆಸರೆಯಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw