ಹೇಳಿದಂತೆ ಕೇಳಲಿಲ್ಲ ಎಂದು ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪಾಪಿ ಪತಿ!

teena madhyapradesh
26/09/2021

ಭೋಪಾಲ್: ಮದ್ಯ ವ್ಯಸನಿ ಪತಿಯ ಕಾಟದಿಂದ ಬೇಸತ್ತು ತವರು ಮನೆಗೆ ಮಹಿಳೆಯೊಬ್ಬರು ಹೋಗಿದ್ದು, ಆದರೆ ಪಾಪಿ ಪತಿ ಅಲ್ಲಿಯೂ ಬಂದು ಮಹಿಳೆಯ ಮೂಗು ಕಚ್ಚಿ ತುಂಡರಿಸಿರುವ ಹೀನ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.

ರತ್ಲಾಮ್ ಜಿಲ್ಲೆಯ ಅಲೌಟ್ ನಿವಾಸಿಯಾಗಿದ್ದ ಟೀನಾ ಉಜ್ಜೈನಿಯ ದಿನೇಶ್ ಎಂಬಾತನ ಜೊತೆಗೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸರಿಯಾಗಿ ಕೆಲಸಕ್ಕೂ ಹೋಗದೇ ಕುಟುಂಬವನ್ನು ನಿರ್ವಹಿಸದೇ ಕಂಠಮಟ್ಟ ಕುಡಿದು ಬಂದು ದಿನವೂ ಪತ್ನಿಗೆ ದಿನೇಶ್ ಟಾರ್ಚರ್ ನೀಡುತ್ತಿದ್ದ. ಜೊತೆಗೆ ಮಕ್ಕಳಿಗೂ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

ಪತಿಯ ಈ ವರ್ತನೆಯಿಂದ ರೋಸಿ ಹೋದ ಟೀನಾ ಅವರು, ತಮ್ಮ ತವರಿಗೆ ಹೋಗಿ  ಪತಿಯ ವಿರುದ್ಧ ವಿಚ್ಛೇದನಕ್ಕೂ ಅರ್ಜಿ ಹಾಕಿದ್ದರು. ಆದರೆ, ತನ್ನ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು ಎಂದು ಅಲ್ಲಿಗೂ ಬಂದು ಕಿರುಕುಳ ನೀಡುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರೇ ಪತ್ನಿಯ ಮೂಗು ಕಚ್ಚಿ ತುಂಡರಿಸಿದ್ದಾನೆ.

ಇನ್ನೂ ಪತಿಯ ಕೃತ್ಯದ ವೇಳೆ ಟೀನಾ ಅವರು ಜೋರಾಗಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ನೆರೆ ಹೊರೆಯವರು ಸ್ಥಳಕ್ಕೆ ಬಂದು ಟೀನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು

ಸಿಎಂ ಬೊಮ್ಮಾಯಿಯನ್ನು ಡ್ರೈವಿಂಗ್ ಮಾಡೋದು ಯಡಿಯೂರಪ್ಪ | ಸಿದ್ದರಾಮಯ್ಯ

ಪುರುಷರ ಒಳ ಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ: ಸೃಷ್ಟಿಯಾಯ್ತು ಹೊಸ ವಿವಾದ

‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ | ಮಮತಾ ಬ್ಯಾನರ್ಜಿ ಕಿಡಿ

ಆಟಿಕೆ ಗನ್ ತೋರಿಸಿ ಕಾರನ್ನೇ ಅಪಹರಿಸಿದ್ದ ಐವರು ಅರೆಸ್ಟ್!

ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ

ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್

ಇತ್ತೀಚಿನ ಸುದ್ದಿ

Exit mobile version