ಪತ್ನಿಯ ಮೃತದೇಹ ಹೆಗಲಲ್ಲಿ ಹೊತ್ತು ಸ್ಮಶಾನಕ್ಕೆ ಸಾಗಿಸಿದ ಭಿಕ್ಷುಕ | ಹೃದಯ ವಿದ್ರಾವಕ ಘಟನೆ - Mahanayaka
3:21 PM Saturday 14 - December 2024

ಪತ್ನಿಯ ಮೃತದೇಹ ಹೆಗಲಲ್ಲಿ ಹೊತ್ತು ಸ್ಮಶಾನಕ್ಕೆ ಸಾಗಿಸಿದ ಭಿಕ್ಷುಕ | ಹೃದಯ ವಿದ್ರಾವಕ ಘಟನೆ

telangana
28/04/2021

ತೆಲಂಗಾಣ: ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ದಂಪತಿಯ ಪೈಕಿ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಪತಿಯು ಪತ್ನಿಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಹೆಗಲಿನಲ್ಲಿ ಹೊತ್ತುಕೊಂಡು ಬಂದ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ.

ನಾಗಲಕ್ಷ್ಮಿ ಎಂಬವರು ಮೃತಪಟ್ಟ ಮಹಿಳೆಯಾಗಿದ್ದು, ಇವರ ಪತಿ ಸ್ವಾಮಿ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತಂದಿದ್ದಾರೆ.

ನಾಗಲಕ್ಷ್ಮೀ ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಇಲ್ಲಿನ ರೈಲು ನಿಲ್ದಾಣದಲ್ಲಿ ವಾಸವಿದ್ದರು ಎನ್ನಲಾಗಿದೆ. ಅದೇ ಸ್ಥಳದಲ್ಲಿ ನಾಗಲಕ್ಷ್ಮಿ ನಿಧನರಾಗಿದ್ದರು.

ಇಲ್ಲಿನ ರೈಲ್ವೆ ಪೊಲೀಸರು ಮಹಿಳೆಯ ಅಂತ್ಯಕ್ರಿಯೆಗಾಗಿ ಪತಿ ಸ್ವಾಮಿಗೆ 2500 ರೂಪಾಯಿಗಳನ್ನು ನೀಡಿದ್ದಾರೆ. ಆದರೆ ಮೃತದೇಹವನ್ನು ಸಾಗಿಸಲು ಯಾವುದೇ ವಾಹನದವರು ಮುಂದೆ ಬರಲಿಲ್ಲ.

ಬಹಳಷ್ಟು ಹೊತ್ತು ಕಾದ ಪತಿ ಸ್ವಾಮಿ, ಕೊನೆಗೆ ಯಾವುದೇ ಸಹಾಯ ದೊರಕದೇ ಇದ್ದಾಗ. ಪತ್ನಿಯ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದಾರೆ. ಈ ದಾರುಣ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ವಾಟ್ಸಾಪ್ ಗೆ ಜಾಯಿನ್ ಆಗಿ

https://chat.whatsapp.com/HJEfioQkSAFHygilrmazeA

ಇತ್ತೀಚಿನ ಸುದ್ದಿ