ಪತ್ನಿಯ ಸಾವಿನ ಸುದ್ದಿ ಕೇಳಿ, ಸಾವಿನ ಕದ ತಟ್ಟಿದ ಪತಿ! - Mahanayaka
4:02 AM Wednesday 11 - December 2024

ಪತ್ನಿಯ ಸಾವಿನ ಸುದ್ದಿ ಕೇಳಿ, ಸಾವಿನ ಕದ ತಟ್ಟಿದ ಪತಿ!

12/02/2021

ಕಲಬುರಗಿ: ಪತ್ನಿಯ ಸಾವಿನ ಸುದ್ದಿ ಕೇಳಿ ಆತನಿಗೆ ಇನ್ನು ಬದುಕು ವ್ಯರ್ಥ ಅನ್ನಿಸಿತು. ಒಂದೆಡೆ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದರೆ, ಇನ್ನೊಂಡದೆಡೆ ತನ್ನ ಪ್ರೀತಿಯ ಪತ್ನಿಯ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

 ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದ ನಿವಾಸಿ 28 ವರ್ಷದ ದೇವಾ ಗುತ್ತೇದಾರ್​ ಎಂಬವರ ಪತ್ನಿ ಜ್ಯೋತಿ ಎಂಬವರು ಮಹಾರಾಷ್ಟ್ರದ ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಸುದ್ದಿ ದೇವಾ ಅವರಿಗೆ ತಿಳಿಯುತ್ತಿದ್ದಂತೆಯೇ ಅವರು ಶಾಕ್ ಗೊಳಗಾಗಿದ್ದರು.

ಪತ್ನಿಯ ಸಾವಿನ ಸುದ್ದಿಯನ್ನು ದೇವಾ ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ  ಶುಕ್ರವಾರ ತನ್ನ ಗ್ರಾಮದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ