ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ - Mahanayaka

ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ

gujarat
03/10/2021

ಅಹ್ಮದಾಬಾದ್: ಪತಿಯೋರ್ವ ತನ್ನ ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ್ದು,  ಮಾರಾಟವಾದ ಮಹಿಳೆಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಸ್ಥಳಕ್ಕೆ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ ಘಟನೆ  ಗುಜರಾತ್ ನಲ್ಲಿ ನಡೆದಿದೆ.

ಈ ಘಟನೆ ನಡೆದ ಬಳಿಕ 21 ವರ್ಷ ವಯಸ್ಸಿನ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.  ಇಲ್ಲಿನ ಮೌ ನಿವಾಸಿಯೋರ್ವ 21 ವರ್ಷ ವಯಸ್ಸಿನ ಯುವತಿಯ ಪತಿಯಾಗಿದ್ದು, ಈತ ತನ್ನ ಪತ್ನಿಯನ್ನು ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಲಕ್ಕಿ ಹೊಟೇಲ್ ಗೆ ಕರೆದುಕೊಂಡು ಹೋಗಿದ್ದ.

ಈ ವೇಳೆ ಸೋನು ಶರ್ಮಾ ಎಂಬಾತ ಮಹಿಳೆಯ ಪತಿಯನ್ನು ಸಂಪರ್ಕಿಸಿದ್ದು, ನಿನ್ನ ಪತ್ನಿಯನ್ನು ತನಗೆ ಮಾರಾಟ ಮಾಡು 500 ರೂಪಾಯಿ ಕೊಡುವುದಾಗಿ ಆತ ಹೇಳಿದ್ದಾನೆ. ಈ ವೇಳೆ ಪತಿಯು ಆತನಿಂದ 500 ರೂಪಾಯಿ ಪಡೆದುಕೊಂಡು ಪತ್ನಿಯನ್ನು ಆತನಿಗೆ ಮಾರಾಟ ಮಾಡಿ ಸ್ಥಳದಿಂದ ತೆರಳಿದ್ದಾನೆ. ಇತ್ತ ಮಹಿಳೆಯನ್ನು ಖರೀದಿಸಿದ ಶರ್ಮಾ, ಮಹಿಳೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ.

ಈ ಘಟನೆಯ ಬಗ್ಗೆ ಮಹಿಳೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಆರೋಪಿ ಸೋನು ಶರ್ಮಾನನ್ನು ಬಂಧಿಸಿದ್ದಾರೆ.  ಸದ್ಯ ಸಂತ್ರಸ್ತ ಮಹಿಳೆಯನ್ನು ಸಿಕಾರಿನಲ್ಲಿರುವ ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಒಂದು ವರ್ಷದ ಬಳಿಕ ಆರೋಪಿ ಅರೆಸ್ಟ್

ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ

ಬಟ್ಟೆ ಒಣಗಲು ಹಾಕುತ್ತಿರುವ ವೇಳೆ ವಿದ್ಯುತ್ ಶಾಕ್: ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲಿಯೇ ಸಾವು!

ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ದಾರುಣ ಸಾವು!

ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್

ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಹಿಂದೂಗಳಿಗೆ ಅಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ | ಕೆ.ಎಸ್‌.ಈಶ್ವರಪ್ಪ ಆರೋಪ

ಇತ್ತೀಚಿನ ಸುದ್ದಿ