ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಂದು ಹೈಡ್ರಾಮಾ ಆಡಿದ ಪತಿ | ಪೊಲೀಸರಿಗೆ ಈತ ಸಿಕ್ಕಿ ಬಿದ್ದದ್ದು ಹೇಗೆ? - Mahanayaka
1:16 AM Wednesday 11 - December 2024

ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಂದು ಹೈಡ್ರಾಮಾ ಆಡಿದ ಪತಿ | ಪೊಲೀಸರಿಗೆ ಈತ ಸಿಕ್ಕಿ ಬಿದ್ದದ್ದು ಹೇಗೆ?

sandhya
22/11/2021

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂದರು ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರಕಿದ್ದು, ಪತಿಯೇ ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಬರ್ಬರವಾಗಿ ಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ.

ಒಂದೂವರೆ ವರ್ಷದ ಹಿಂದೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಮದುವೆಯಾಗಿದ್ದ ಸಂಧ್ಯಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಸೃಷ್ಟಿಯಾಗಿತ್ತು. ಹೀಗಾಗಿ ಪತಿ ಪತ್ನಿಯರು ದೂರವಾಗಿದ್ದರು. ಸಂಧ್ಯಾ ತವರು ಮನೆಯಲ್ಲಿಯೇ ಇದ್ದರು ಕೊಂಡು ಕಂಪ್ಯೂಟರ್ ತರಬೇತಿ ಪಡೆದುಕೊಳ್ಳುತ್ತಿದ್ದರು.

ಈ ನಡುವೆ ಒಂದು ದಿನ ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಸಂಧ್ಯಾ ಏಕಾಏಕಿ ನಾಪತ್ತೆಯಾಗಿದ್ದು, ಇದರಿಂದಾಗಿ ಆತಂಕಗೊಂಡ ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎನ್ನುವ ವಿಚಾರ ತಿಳಿದಾಗ ಪತಿ ಷಡಕ್ಷರಿ ಹೈಡ್ರಾಮಾ ಮಾಡಿದ್ದು, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಮಂಡ್ಯದ ಆಸ್ಪತ್ರೆಗೆ ದಾಖಲಾಗಿ ಅನುಕಂಪ ಸೃಷ್ಟಿಸಲು ಯತ್ನಿಸಿದ್ದಾನೆ.

ಇತ್ತ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಪತಿಯ ಮೇಲೆಯೇ ಅನುಮಾನ ಮೂಡಿದೆ ಹಾಗಾಗಿ ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೆ ಪೊಲೀಸರು ಕಾದಿದ್ದಾರೆ. ಬಳಿಕ ಆತನನ್ನು ಪ್ರಶ್ನಿದಾಗ ತನಗೇನೂ ಗೊತ್ತೇ ಇಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಕೊನೆಗೂ ತಪ್ಪೊಪ್ಪಿಕೊಂಡಿದ್ದು, ಕಂಪ್ಯೂಟರ್ ಕ್ಲಾಸ್ ನಿಂದ ಪತ್ನಿಯನ್ನು ಕರೆತಂದು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಸದ್ಯ, ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಗೆ ಮಳೆ ನಿಲ್ಲಿಸೋಕೆ ಬರುತ್ತಾ? | ಸಚಿವ ಈಶ್ವರಪ್ಪ ಬೇಜವಾಬ್ದಾರಿಯ ಹೇಳಿಕೆ!

ಪ್ರಾರ್ಥನೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಚರ್ಚ್ ಧರ್ಮಗುರು ನಿಧನ

ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

ಬಾಕಿ ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈಯನ್ನೇ ಕತ್ತರಿಸಿದ ಪಾಪಿಗಳು!

ಇತ್ತೀಚಿನ ಸುದ್ದಿ