ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ನಾಟಕವಾಡಿದ ಪತಿ! - Mahanayaka

ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ನಾಟಕವಾಡಿದ ಪತಿ!

crime news
27/02/2022

ಚಿಕ್ಕೋಡಿ: ವ್ಯಕ್ತಿಯೋರ್ವ ಕುಡಿತದ ಮತ್ತಿನಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ನಾಟಕವಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ.


Provided by

ಪ್ರದೀಪ್  ಅಲಿಯಾಸ್  ಪ್ರದೀಪ್ ಕಾಂಬಳೆ ಎಂಬಾತ ಪತ್ನಿಯನ್ನೇ ಹತ್ಯೆ ಮಾಡಿದ ಆರೋಪಿಯಾಗಿದ್ದು,  15 ವರ್ಷಗಳ ಹಿಂದೆ ಆಶಾ ಎಂಬವರನ್ನು ಮದುವೆಯಾಗಿದ್ದ. ಇವರ ಜೀವನ ಸುಂದರವಾಗಿತ್ತು.

ಪತ್ನಿ ಕೆಲಸಕ್ಕೆ ಹೋಗಲು ಆರಂಭಿಸಿದ ಮೇಲೆ ಪ್ರದೀಪ್ ಪತ್ನಿಯ ಮೇಲೆ ಅನುಮಾನ ಪಡಲು ಆರಂಭಿಸಿದ್ದು,  ಕುಡಿತದ ದಾಸನಾಗಿ  ಪ್ರತೀ ದಿನ ಪತ್ನಿಯ ಜೊತೆಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.


Provided by

ಫೆ.24ರಂದು ಇದೇ ವಿಚಾರಕ್ಕೆ ಪತ್ನಿಯ ಜೊತೆಗೆ ಜಗಳವಾಡಿದ್ದು, ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದು, ಬಳಿಕ ಬೆಳಗ್ಗಿನ ವೇಳೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಊರಿನವರನ್ನು ನಂಬಿಸಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಬಂದು ತನಿಖೆ ನಡೆಸಿದಾಗಲೂ ಆರೋಪಿ ಸತ್ಯ ಒಪ್ಪಿಕೊಂಡಿಲ್ಲ  ಎನ್ನಲಾಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಗಂಡನ ಕಿರುಕುಳದಿಂದ ಬೇಸತ್ತು ಆಶಾ 5 ವರ್ಷಗಳ ವರೆಗೆ ಆತನಿಂದ ದೂರವಾಗಿದ್ದಳಂತೆ, ಆ ಬಳಿಕ, ನಾನಿನ್ನು ಅನುಮಾನ ಪಡುವುದಿಲ್ಲ ಎಂದು ಪ್ರದೀಪನೇ ಮತ್ತೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಕುಡಿತದಿಂದಾಗಿ ಒಂದು ಸಂಸಾರವೇ ಹಾಳಾಗಿದೆ. ತಾಯಿ ಹತ್ಯೆಯಾಗಿದ್ದು, ತಂದೆ ಜೈಲು ಪಾಲಾಗಿದ್ದು, ಮಕ್ಕಳು ಅನಾಥರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾವೇರಿ ನದಿ ದಾಟುವ ವೇಳೆ ದುರಂತ: ಹಲವು ಭಕ್ತರು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ]

ಸೀಮಂತ ಕಾರ್ಯಕ್ರಮ ವೇಳೆ ಅಡುಗೆ ಸಿಲಿಂಡರ್​ ಸ್ಫೋಟ: ನಾಲ್ವರ ಸಾವು, 19 ಮಂದಿ ಗಂಭೀರ

ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು!

ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು

ಇತ್ತೀಚಿನ ಸುದ್ದಿ