ಗಂಜಿ ಬೇಯಿಸುತ್ತಿದ್ದ ಪಾತ್ರೆಗೆ ತಲೆ ತಿರುಗಿ ಬಿದ್ದ ವ್ಯಕ್ತಿಯ ದಾರುಣ ಸಾವು!

ಚೆನ್ನೈ: ಗಂಜಿ ಬೇಯಿಸುತ್ತಿದ್ದ ಪಾತ್ರೆಗೆ ವ್ಯಕ್ತಿಯೊಬ್ಬರು ಬಿದ್ದ ಸಾವನ್ನಪ್ಪಿದ ಘಟನೆ ಮಧುರೈನಲ್ಲಿ ನಡೆದಿದ್ದು, ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುತ್ತುಕುಮಾರ್ ಎಂಬವರು ಮೃತ ವ್ಯಕ್ತಿಯಾಗಿದ್ದು, ಮಧುರೈನ ಪಜಂಗನಾಥಂ ಬಳಿಯ ಮುತ್ತು ಮಾರಿಯಮ್ಮಮ್ ದೇವಸ್ಥಾನದ ಭಕ್ತರಿಗಾಗಿ ದೊಡ್ಡ ಪಾತ್ರೆಯೊಂದರಲ್ಲಿ ಅನ್ನ ಬೇಯಿಸಲಾಗುತ್ತಿತ್ತು. ಈ ವೇಳೆ ಅಲ್ಲಿಯೇ ನಿಂತಿದ್ದ ಮುತ್ತು ಕುಮಾರ್ ಗೆ ಏಕಾಏಕಿ ತಲೆ ಸುತ್ತು ಬಂದಿದ್ದು, ಗಂಜಿ ಬೇಯುತ್ತಿದ್ದ ಪಾತ್ರೆಗೆ ಹೋಗಿ ಒರಗಿ ನಿಂತಿದ್ದಾರೆ.
ಅವರು ಸುಧಾರಿಸಿಕೊಳ್ಳುವಷ್ಟರಲ್ಲಿ ಆಯ ತಪ್ಪಿ ಪಾತ್ರೆಯೊಳಗೆ ಬಿದ್ದಿದ್ದಾರೆ. ಪಾತ್ರೆಯೊಳಗೆ ಬಿದ್ದ ಬಳಿಕ ಎದ್ದೇಳಲು ಸಾಧ್ಯವಾಗದೇ ಕುದಿಯುತ್ತಿದ್ದ ನೀರಿನಲ್ಲಿ ಸಿಲುಕಿದ್ದಾರೆ. ಪಕ್ಕದಲ್ಲಿ ಸಾಕಷ್ಟು ಜನರಿದ್ದರೂ ತಕ್ಷಣದಲ್ಲಿ ಮುತ್ತುಕುಮಾರ್ ಅವರನ್ನು ಪಾತ್ರೆಯಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಭಾರೀ ದೇಹವನ್ನು ಹೊಂದಿದ್ದ ಮುತ್ತು ಕುಮಾರ್ ಅವರನ್ನು ಹೊರ ತೆಗೆಯಲು ತಕ್ಷಣದಲ್ಲಿ ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಅವರು ಕುದಿಯುತ್ತಿದ್ದ ಪಾತ್ರೆಯಲ್ಲಿ ಬೆಂದು ಹೋಗಿದ್ದರು.
ಘಟನೆ ಜುಲೈ 29ರಂದು ನಡೆದಿದೆ. ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka