ಹಿಂದೂ ಗುತ್ತಿಗೆದಾರನ ಆತ್ಮಹತ್ಯೆ: ರಾಜೀನಾಮೆ ನೀಡುತ್ತಾರಾ? - Mahanayaka
11:06 PM Thursday 12 - December 2024

ಹಿಂದೂ ಗುತ್ತಿಗೆದಾರನ ಆತ್ಮಹತ್ಯೆ: ರಾಜೀನಾಮೆ ನೀಡುತ್ತಾರಾ?

eshwarappa
13/04/2022

ಬೆಳಗಾವಿ ಮೂಲದ ಹಿಂದೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಇದೀಗ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈಶ್ವರಪ್ಪ ತಲೆದಂಡಕ್ಕೆ ಭಾರೀ ಒತ್ತಾಯ ಕೇಳಿ ಬಂದಿದೆ.

ಈ ನಡುವೆ ಇಂದು ಈಶ್ವರಪ್ಪ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು,  ರಾಜೀನಾಮೆ ಘೋಷಿಸುತ್ತಾರಾ? ಎನ್ನುವ ಮಾತುಗಳು ಸದ್ಯ ರಾಜಕೀಯವಲಯದಲ್ಲಿ ಕೇಳಿ ಬಂದಿದೆ.

ಮೈಸೂರಿನಿಂದ ಶಿವಮೊಗ್ಗಕ್ಕೆ ಈಗಾಗಲೇ ಕೆ.ಎಸ್.ಈಶ್ವರಪ್ಪ ಹೊರಟಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 12:30ಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಂತೋಷ್​ ಸಾವಿನ ಸುದ್ದಿ ಬಂದ ಬೆನ್ನಲ್ಲೇ ನಿನ್ನೆಈಶ್ವರಪ್ಪ ಹೇಳಿದ್ದರು. ಅತ್ತ ಸಂತೋಷ್​​ ಸಾವಿಗೆ ಈಶ್ವರಪ್ಪ ಕಾರಣ. ಅವರನ್ನು ಬಂಧಿಸೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಮೃತನ ಕುಟುಂಬ ಪಟ್ಟು ಹಿಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿಆರ್‌ ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಕಾರ್ಯಾಚರಣೆ: ಮೂವರು ಉಗ್ರರ ಬಂಧನ

ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ!

ಕೇಬಲ್ ಕಾರ್ ಡಿಕ್ಕಿ ಪ್ರಕರಣ: ಮೂವರು ಪ್ರವಾಸಿಗಳ ದಾರುಣ ಸಾವು

ಮತ್ತೊಂದು ಎಲೆಕ್ಟ್ರಿಕ್ ಬೈಕ್ ದುರಂತ: ಕಂಟೈನರ್ ನೊಳಗಿದ್ದ 20 ಬೈಕ್ ಗಳು ಸುಟ್ಟು ಭಸ್ಮ

ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವ ಗಳಿಂದಲೇ ಚಾಲನೆ

ಇತ್ತೀಚಿನ ಸುದ್ದಿ