ಪತಿಗೆ ಪರಸ್ತ್ರಿ ಸಹವಾಸ: ಪತಿ-ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಿದ ಪತ್ನಿ
![raipura](https://www.mahanayaka.in/wp-content/uploads/2022/06/raipura.jpg)
ರಾಯ್ ಪುರ: ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇಲೆ ಯುವಕ ಮತ್ತು ಯುವತಿಯನ್ನು ಅರೆಬೆತ್ತಳೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಘಟನೆ ಛತ್ತೀಸ್‌ಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜೂನ್ 11 ರಂದು ಊರಿಂದಬೇಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
ಪ್ರಕರಣದಲ್ಲಿಯುವಕನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಗಂಡನನ್ನು ಪರಸ್ತ್ರೀ ಜೊತೆ ಕಾಣಿಸಿಕೊಂಡಿದ್ದಾನೆ ಎಂದು ಪತ್ನಿ ಮನೆಯವರಿಗೆ ಮಾಹಿತಿ ನೀಡಿ ಕರೆಸಿದರು. ನಂತರ ಗ್ರಾಮದ ಮೂಲಕ ಇಬ್ಬರನ್ನು ಬೆತ್ತಳೆಯಾಗಿ ಮೆರವಣಿಗೆ ಮಾಡಲಾಗಿದೆ.
ಈ ವೇಳೆ ಅವರ ಬಟ್ಟೆಗಳನ್ನು ಬಲವಂತವಾಗಿ ತೆಗೆದಿದ್ದು ಸಂತ್ರಸ್ತೆಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಒಳ ಉಡುಪಿನಲ್ಲಿ ಚಿನ್ನ ಸಾಗಾಗಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ
ಒಂದೇ ಮಳೆಗೆ ಕಿತ್ತು ಹೋದ ಪ್ರಧಾನಿಯನ್ನು ಸ್ವಾಗತಿಸಿದ್ದ ಹೊಸ ರಸ್ತೆಗಳು!
ಬಾಳು ಕೊಡುತ್ತೇನೆಂದು ಮಹಿಳೆಯನ್ನು ಕರೆದೊಯ್ದ ಅರ್ಚಕ, ಕಾಡಿನಲ್ಲಿ ಬಿಟ್ಟು ಹೋದ!
ಬಾಳು ಕೊಡುತ್ತೇನೆಂದು ಮಹಿಳೆಯನ್ನು ಕರೆದೊಯ್ದ ಅರ್ಚಕ, ಕಾಡಿನಲ್ಲಿ ಬಿಟ್ಟು ಹೋದ!