ತವರಿಗೆ ಹೋದ ಪತ್ನಿ ಮನೆಗೆ ಮರಳಿದಾಗ ಪತಿಯ ಮಡಿಲಲ್ಲಿದ್ದಳು ವಿಜ್ಞಾನ ಶಿಕ್ಷಕಿ! | ಆ ಮೇಲೆ ನಡೆದೇ ಹೋಯಿತು ದೊಡ್ಡ ದುರಂತ!
ಬಿಹಾರ: ನೆಮ್ಮದಿಯಲ್ಲಿದ್ದ ಪತಿ-ಪತ್ನಿಯರ ನಡುವೆ ವಿಜ್ಞಾನ ಶಿಕ್ಷಕಿ ಬಂದಿದ್ದಳು. ಪತಿಯು ವಿಜ್ಞಾನ ಶಿಕ್ಷಕಿಯ ಮೋಹ ಪಾಶಕ್ಕೆ ಸಿಲುಕಿದ್ದಾನೆ ಎನ್ನುವುದು ಪತ್ನಿಗೂ ತಿಳಿದಿದೆ. ಇದು ಇಷ್ಟರಲ್ಲೇ ಮುಗಿದಿದ್ದರೆ, ಚೆನ್ನಾಗಿತ್ತು. ಆದರೆ ಪರಿಸ್ಥಿತಿ ಮೀರಿದಾಗ ಈ ಘಟನೆ ಅನಾಹುತಕ್ಕೆ ಕಾರಣವಾಗಿದೆ.
ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಮತಿ-ರಾಮ್ ಲಾಲ್ ದಂಪತಿಯ ನಡುವೆ ವಿಜ್ಞಾನ ಶಿಕ್ಷಕಿ ದಾಮಿನಿ ಎಂಟ್ರಿ ನೀಡಿದ್ದಳು. ಲಾಕ್ ಡೌನ್ ಸಂದರ್ಭದಲ್ಲಿ ದಾಮಿನಿ ಹಾಗೂ ರಾಮ್ ಲಾಲ್ ನ ಓಡಾಟ ಕಡಿಮೆಯಾಗಿದ್ದು, ಪತಿ ಉದ್ಧಾರ ಆಗಿದ್ದಾನೆ ಎಂದು ಪತ್ನಿ ಸುಮತಿ ಅಂದುಕೊಂಡಿದ್ದಳು. ಆದರೂ ಪತಿಯನ್ನು ಪರೀಕ್ಷೆ ಮಾಡಬೇಕು. ರೆಡ್ ಹ್ಯಾಂಡ್ ಆಗಿ ಪತಿ ತನ್ನ ಕೈಗೆ ಸಿಗಬೇಕು ಎಂದು ಸುಮತಿ ಪ್ಲಾನ್ ಮಾಡಿದ್ದಾಳೆ.
ಒಂದು ದಿನ ಸುಮತಿ ತನ್ನ ತವರು ಮನೆಗೆ ತಾನು ಹೋಗುತ್ತಿದ್ದೇನೆ ಎಂದು ಪತಿ ರಾಮ್ ಲಾಲ್ ನಲ್ಲಿ ಹೇಳಿದ್ದಾಳೆ. ಬಹಳಷ್ಟು ಸಮಯದಿಂದ ದಾಮಿನಿಯನ್ನು ನೋಡದೇ ಚಡಪಡಿಸುತ್ತಿದ್ದ ರಾಮ್ ಲಾಲ್ ಗೆ ಪತ್ನಿಯ ಮಾತು ಕೇಳಿ ಸಂತಸದಲ್ಲಿ 100 ವೋಲ್ಟ್ ಕರೆಂಟ್ ಪಾಸ್ ಆದಂತಾಗಿದೆ. ಪ್ರತೀ ದಿನ ಬೈಕ್ ನಲ್ಲಿ ಸುತ್ತಾಡುತ್ತಿದ್ದ ರಾಮ್ ಲಾಲ್ ಹಾಗೂ ಧಾಮಿನಿಗೆ ಕೊರೊನಾ ಸಂಕಷ್ಟದಿಂದಾಗಿ ಕಷ್ಟವಾಗಿತ್ತು. ಆದರೆ ಇದೀಗ ಪತ್ನಿಯೇ ಮನೆಯಿಂದ ಹೊರಗೆ ಹೋಗುತ್ತಿದ್ದಾಳೆ ಎನ್ನುವುದು ತಿಳಿಯುತ್ತಿದ್ದಂತೆಯೇ ಪತಿ ಸಂತಸದಲ್ಲಿ ಒಳಗಿಂದೊಳಗೆ ಕುಣಿದು ಕುಪ್ಪಳಿಸಿದ್ದಾನೆ.
ಪತ್ನಿ ತವರಿಗೆ ಹೋದ ತಕ್ಷಣವೇ ರಾಮ್ ಲಾಲ್, ದಾಮಿನಿಗೆ ಕರೆ ಮಾಡಿ ತನ್ನ ಮನೆಗೆ ಬರಲು ಹೇಳಿದ್ದಾನೆ. ಆದರೆ ಆತನ ಲೆಕ್ಕಚಾರಗಳೆಲ್ಲವೂ ತಪ್ಪಾಗಿದೆ. ಮನೆಗೆ ಹೋಗುವುದಾಗಿ ಹೇಳಿದ್ದ ಪತ್ನಿ ಕೆಲವೇ ಸಮಯಗಳ ಬಳಿಕ ಮನೆಗೆ ಮರಳಿ ಬಂದಿದ್ದಾಳೆ. ಈ ವೇಳೆ ಮನೆಯ ಬಾಗಿಲು ಲಾಕ್ ಆಗಿತ್ತು. ಆಕೆ ತನ್ನಕೀ ಬಳಸಿ ಬಾಗಿಲು ತೆರೆದಿದ್ದು, ಈ ವೇಳೆ ತನ್ನ ಪತಿರಾಯ ವಿಜ್ಞಾನ ಶಿಕ್ಷಕಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡಿರುವುದನ್ನು ನೋಡಿ ಬೆಂಕಿ ಕಿಡಿಯಾಗಿದ್ದಾಳೆ.
ಈ ವಿಚಾರ ದಂಪತಿಯ ನಡುವೆ ಭಾರೀ ವಾಗ್ದಾಳಿಗೆ ಕಾರಣವಾಗಿ ಇಬ್ಬರೂ ಬೈದುಕೊಂಡಿದ್ದಾರೆ. ತಮ್ಮ ರಹಸ್ಯ ಪತ್ನಿಗೆ ತಿಳಿಯಿತು ಇನ್ನು ತಮ್ಮ ಸಂಬಂಧ ಬಹಿರಂಗವಾಗುತ್ತದೆ ಎಂದು ಭೀತಿಗೊಂಡ ರಾಮ್ ಲಾಲ್ ಹಾಗೂ ದಾಮಿನಿ ಸುಮತಿಯ ಕತ್ತು ಹಿಸುಕಿದ್ದಾರೆ. ಆಕೆ ಸತ್ತಿರುವುದು ತಿಳಿಯುತ್ತಿದ್ದಂತೆಯೇ ಮೃತದೇಹವನ್ನು ನೇಣಿಗೇರಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಆತ್ಮಹತ್ಯೆಯ ಕಥೆ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಇದು ಆತ್ಮಹತ್ಯೆಯಲ್ಲ ಎನ್ನುವುದನ್ನು ಮೇಲ್ನೋಟದಲ್ಲಿಯೇ ಕಂಡು ಹಿಡಿದಿದ್ದಾರೆ. ರಾಮ್ ಲಾಲ್ ನನ್ನು ವಶಕ್ಕೆ ಪಡೆದು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ತನ್ನ ಪ್ರೇಮ ಪುರಾಣವನ್ನು ರಾಮ್ ಲಾಲ್ ಕಕ್ಕಿದ್ದಾನೆ. ಇದರಿಂದಾಗಿ ವಿಜ್ಞಾನ ಶಿಕ್ಷಕಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದು,ಇಬ್ಬರ ವಿಚಾರಣೆ ನಡೆಯುತ್ತಿದೆ.