ಮುನಿಸಿಕೊಂಡ ಪತ್ನಿಯನ್ನು ನಯವಾಗಿ ನದಿದಂಡೆಗೆ ಕರೆದ ಪತಿ | ದೈಹಿಕ ಆಸೆ ತೀರಿಸಿಕೊಂಡು ಆತ ಪತ್ನಿಯನ್ನು ಮಾಡಿದ್ದೇನು ಗೊತ್ತಾ? - Mahanayaka
8:15 PM Wednesday 11 - December 2024

ಮುನಿಸಿಕೊಂಡ ಪತ್ನಿಯನ್ನು ನಯವಾಗಿ ನದಿದಂಡೆಗೆ ಕರೆದ ಪತಿ | ದೈಹಿಕ ಆಸೆ ತೀರಿಸಿಕೊಂಡು ಆತ ಪತ್ನಿಯನ್ನು ಮಾಡಿದ್ದೇನು ಗೊತ್ತಾ?

07/02/2021

ಲಕ್ನೋ: ಮುನಿಸಿಕೊಂಡು ತವರಿಗೆ ಹೋಗಿದ್ದ ಪತ್ನಿಯನ್ನು ಹೇಗೋ ಸಮಾಧಾನಪಡಿಸಿದ ಆತ ನದಿಯೊಂದರ ಬಳಿಗೆ ಬರಲು ಹೇಳಿದ್ದಾನೆ. ಅಲ್ಲಿ ಪತ್ನಿಯ ಜೊತೆ ದೈಹಿಕ ಸಂಬಂಧ ಹೊಂದಿದ್ದಾನೆ. ಆದರೆ, ಇದಾದ ಬಳಿಕ ಪತ್ನಿ ನಾಪತ್ತೆಯಾಗಿದ್ದಾಳೆ. ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿಯೇ ದೂರು ನೀಡುತ್ತಾನೆ. ಪ್ರಕರಣ ದಾಖಲಿಸಕೊಂಡ ಪೊಲೀಸರು ಮೂರೇ ದಿನದಲ್ಲಿ ಆರೋಪಿಯನ್ನು ಬಂಧಿಸುತ್ತಾರೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹಮೀರ್ ಪುರದಲ್ಲಿ. 21 ವರ್ಷದ ಕಂಚನ್ ಎರಡು ವರ್ಷಗಳ ಹಿಂದೆ ಅಮಿತ್ ಎಂಬ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ  ಒಂದು ವರ್ಷದ ಮಗು ಕೂಡ ಇದೆ. ಇತ್ತೀಚೆಗಷ್ಟೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಂಚನ್ ಪತಿಯ ಮೇಲೆ ಮುನಿಸಿಕೊಂಡು ತವರಿಗೆ ಹೋಗಿದ್ದಾಳೆ.

ತವರಿಗೆ ಹೋದ ಪತ್ನಿಯನ್ನು ಹೇಗೋ ಸಮಾಧಾನಪಡಿಸಿದ್ದ ಅಮಿತ್, ಬೆಟ್ಟಾ ನದಿ ದಂಡೆಯ ಬಳಿಗೆ ಮಾತನಾಡಲು ಕರೆದಿದ್ದ. ಆ ಬಳಿಕ ಪೊಲೀಸ್ ಠಾಣೆಗೆ ಬಂದು ನದಿಯ ಬಳಿಯಲ್ಲಿ ಪತ್ನಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾನೆ.

ಕಂಚನ್ ಳನ್ನು ಹುಡುಕುತ್ತಾ ನದಿ ಬಳಿ ಬಂದಾಗ ನದಿ ದಂಡೆಯಲ್ಲಿ ಕಂಚನ್ ಳ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಕಾಡಿತ್ತು. ಸ್ವತಃ ಪತಿಯೇ ದೂರು ನೀಡಿದ್ದರಿಂದ ಆರಂಭದಲ್ಲಿ ಪೊಲೀಸರಿಗೆ ಅನುಮಾನ ಬಂದಿರಲಿಲ್ಲ.

ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಪತಿಯ ಮೇಲೆ ಅನೇಕ ಅನುಮಾನಗಳು ಕಂಡು ಬಂದಿದ್ದು, ಪೊಲೀಸರು ಪತಿ ಅಮಿತ್ ನನ್ನು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಆತ ತಪ್ಪು ಒಪ್ಪಿಕೊಂಡಿದ್ದಾನೆ.

ಪತ್ನಿ ಕಂಚನ್ ಮೇಲೆ ತನಗೆ ಬಹಳ ಕೋಪ ಇತ್ತು ಹಾಗಾಗಿ ನದಿ ದಂಡೆಗೆ ಆಕೆಯನ್ನು ಕರೆದಿದ್ದು, ಅಲ್ಲಿ ತನ್ನು ದೈಹಿಕ ಆಸೆ ಪೂರೈಸಿಕೊಂಡು ಪತ್ನಿಯನ್ನು ನದಿಗೆ ಎಸೆದಿರುವುದಾಗಿ ಹೇಳಿದ್ದಾನೆ. ಅಂತೂ ಬಣ್ಣದ ಮಾತನ್ನು ನಂಬಿ ಕಂಚನ್ ಬಲಿಯಾಗಿದ್ದಾಳೆ. ಪತಿ ಅಂಚನ್ ಜೈಲು ಪಾಲಾಗಿದ್ದಾನೆ.

ಇತ್ತೀಚಿನ ಸುದ್ದಿ