ಮದುವೆಗೆ 4  ದಿನ ಬಾಕಿಯಿರುವಾಗಲೇ ಯುವತಿಯನ್ನು ನಡುರಸ್ತೆಯಲ್ಲಿ ಸಜೀವ ದಹಿಸಿ ಹತ್ಯೆ!

17/11/2020

ಪಾಟ್ನಾ: ಮದುವೆಗೆ ನಾಲ್ಕು ದಿನ ಬಾಕಿಯಿರುವಾಗಲೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ, ನಡು ರಸ್ತೆಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ, ಬಾವಿಯೊಂದಕ್ಕೆ ಎಸೆದಿರುವ ಭೀಕರ ಘಟನೆ  ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳಾದ ಸತೀಶ್ ಕುಮಾರ್ ರಾಯ್ ಹಾಗೂ ಚಂದನ್ ಕುಮಾರ್ ರಾಯ್ ಈ ಕೃತ್ಯ ಎಸಗಿರುವುದಾಗಿ  ಯುವತಿಯ ತಾಯಿ ಹೇಳಿಕೆ ನೀಡಿದ್ದಾರೆ. ಯುವತಿ ಸಾವಿಗೂ ಮೊದಲು ಆರೋಪಿಗಳ ಹೆಸರು ಹೇಳಿದ್ದರೂ, ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.

ಹಲವು ಸಮಯಗಳಿಂದ ಈ ಯುವಕರು ಯುವತಿಗೆ ತೊಂದರೆ ನೀಡುತ್ತಿದ್ದರು. ಈ ಯುವತಿ ಅವರನ್ನು ಆಕ್ಷೇಪಿಸುತ್ತಿದ್ದಳು. ಯುವತಿಯ ಮದುವೆಗೆ ನಾಲ್ಕು ದಿನ ಇರುವಾಗಲೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಇನ್ನೂ ಯುವತಿಯ ತಾಯಿಯು ಆರೋಪಿಗಳ ಬಂಧನಕ್ಕಾಗಿ ಮಗಳ ಮೃತದೇಹವನ್ನು ರಸ್ತೆಯಲ್ಲಿಯೇ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂವೇದನಾ ರಹಿತ ಸಹಮಾನವರ ಯಾವುದೇ ಬೆಂಬಲವೂ ಅವರಿಗೆ ದೊರೆತಿಲ್ಲ. ಹತ್ಯೆಗೀಡಾದ ಯುವತಿ ಮುಸ್ಲಿಮ್ ಎನ್ನುವ ಕಾರಣಕ್ಕೆ ಮಾಧ್ಯಮಗಳಿಗೂ ಇದೊಂದು ಗಂಭೀರ ಪ್ರಕರಣ ಎನ್ನುವುದು ಇನ್ನೂ ತಿಳಿದಿಲ್ಲ.

ಇತ್ತೀಚಿನ ಸುದ್ದಿ

Exit mobile version