ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ - Mahanayaka
8:05 PM Wednesday 11 - December 2024

ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

rohith chakrathirtha
05/06/2022

ಬೆಂಗಳೂರು: ಈ ಬಾರಿಯ ವಿದ್ಯಾರ್ಥಿಗಳು ಪರಿಷ್ಕೃತ ಪಾಠಗಳನ್ನು ಓದಿ ಅದೇನು ತಿಳಿದುಕೊಳ್ಳುತ್ತಾರೋ ಗೊತ್ತಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣ ಸಮಿತಿ ತಮಗೆ ಇಷ್ಟ ಬಂದಂತೆ ವಿದ್ಯಾರ್ಥಿಗಳ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದು, ಯಾರದ್ದೋ ಪದ್ಯಕ್ಕೆ ಇನ್ಯಾರೋ ಕವಿಯ ಹೆಸರು ಹಾಕುವ ಮೂಲಕ ಮತ್ತೊಮ್ಮೆ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಷ್ಕರಣೆ ಸಮಿತಿಯವರು ಅದ್ಯಾವ ಮೂಡ್ ನಲ್ಲಿ ಮಕ್ಕಳ ಪಠ್ಯ ತಿದ್ದಿದರೋ ಗೊತ್ತಿಲ್ಲ, ಕಸ್ತೂರಿ ನಿವಾಸ ಚಿತ್ರದ ಗೊಂಬೆ ಕಲಿಸುವ ನೀತಿ ಪಾಠವನ್ನು ಬರೆದವರ ಹೆಸರನ್ನೇ ಬದಲಿಸಿದ್ದು, ಅದ್ಯಾವ ನೀತಿ ಪಾಠ ಹೇಳಲು ಹೊರಟಿದ್ದಾರೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಗೊಂಬೆ ಕಲಿಸುವ ನೀತಿ ಪಾಠವನ್ನು ಆರ್ ಎನ್ ಜಯಗೋಪಾಲ್ ಬರೆದಿದ್ದಾರೆ ಎಂದು ಸಮಿತಿಯವರು ಹೆಸರು ಹಾಕಿದ್ದಾರೆ. ಆದರೆ ಈ ಹಾಡನ್ನು ಬರೆದವರು ಚಿ.ಉದಯ ಶಂಕರ್ ಅವರಾಗಿದ್ದಾರೆ. ಯಾಕೆ ಈ ರೀತಿಯಲ್ಲಿ ತಿರುಚಿ ಪುಸ್ತಕವನ್ನು ಪರಿಷ್ಕರಣೆ ಮಾಡಲಾಗಿದೆ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಸೃಷ್ಟಿಸಿದ್ದು, ಎಂತಹವರ ಕೈಗೆ ಪಠ್ಯಪುಸ್ತಕ ತಿದ್ದುವ ಜವಾ‍ಬ್ದಾರಿ ನೀಡಲಾಗಿದೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಜೊತೆಗೆ ಪರಿಷ್ಕರಣೆಗೊಂಡಿರುವ ಪಠ್ಯವನ್ನು ನಿಷೇಧಿಸಿ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸುವಂತೆ ಒತ್ತಾಯ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೊಸೆಗೆ ಮಕ್ಕಳಾಗುತ್ತಿಲ್ಲ ಎಂದು ತನ್ನಿಬ್ಬರು ಪುತ್ರರಿಂದ ಅತ್ಯಾಚಾರ ನಡೆಸಿದ ಪಾಪಿ ಅತ್ತೆ!

ಮುಖ್ಯಮಂತ್ರಿಯನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ನಯನತಾರಾ- ಶಿವನ್

ನೋಟಿನ ಮೇಲೆ ಗಾಂಧೀಜಿ ಜೊತೆಗೆ ಟ್ಯಾಗೋರ್ ಮತ್ತು ಅಬ್ದುಲ್ ಕಲಾಂ ಹೆಸರು!

ಭಾವಿ ಪತಿಯನ್ನೇ ಬಂಧಿಸಿ ಫೇಮಸ್ ಆಗಿದ್ದ ಲೇಡಿಸಿಂಗಂನ ಬಂಡವಾಳ ಬಯಲು!

ಇತ್ತೀಚಿನ ಸುದ್ದಿ