ಪವಿತ್ರಾ ಗೌಡ ಅವರ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್

pavithra gowda
14/02/2025

ಬೆಂಗಳೂರು:  ನಟ ದರ್ಶನ್ ಗೆಳತಿ ಪವಿತ್ರಾ ಗೌಡ(Pavithra Gowda), ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಇದೀಗ ತಮ್ಮ ಬ್ಯುಸಿನೆಸ್ ನತ್ತ ಮತ್ತೆ ಮುಖ ಮಾಡಿದ್ದಾರೆ.

ಕಳೆದ 8 ತಿಂಗಳಿನಿಂದ ಮುಚ್ಚಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜೈಲು ಸೇರಿದ್ದ ಬಳಿಕ  ಸ್ಟುಡಿಯೋ ಕ್ಲೋಸ್ ಆಗಿತ್ತು. ಪ್ರೇಮಿಗಳ ದಿನದಂದೇ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಆಗಿದೆ.

ಸ್ಟುಡಿಯೋಗೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಆಗಮಿಸಿದ ಪವಿತ್ರಾ ಗೌಡ, ಸ್ಟುಡಿಯೋದಲ್ಲಿ ಗಣಹೋಮ, ಕಾರ್ಯಸಿದ್ಧಿ ಹೋಮ ಮಾಡಿಸಿದ್ದಾರೆ. ರೀಲಾಂಚ್ ಕಾರ್ಯಕ್ರಮಕ್ಕೆ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version