ದಲಿತರ ಮನೆಗೆ ಪೇಜಾವರ ಶ್ರೀ ಬರಬಹುದು ಆದ್ರೆ ಕೋಳಿ ತಿನ್ನಕ್ಕಾಗುತ್ತಾ? | ಹಂಸಲೇಖ ಪ್ರಶ್ನೆಗಳ ಬಾಣ
ಬೆಂಗಳೂರು: ದಲಿತರ ಮನೆಗೆ ಸ್ವಾಮೀಜಿಗಳು ಹೋಗಿ ಹೈಡ್ರಾಮಾ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಿಚಾರವಾಗಿದೆ. ಈ ವಿಚಾರವಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಹಂಸಲೇಖ ಅವರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ… “ದಲಿತರ ಮನೆಗೆ ಪೇಜಾವರ ಶ್ರೀಗಳು ಭೇಟಿ ಕೊಡುವುದು ಎಂದು ಹೇಳುತ್ತಾರೆ. ಅವರು ಹೋಗಿ ದಲಿತರ ಮನೆಯಲ್ಲಿ ಕುಳಿತುಕೊಳ್ಳಬಹುದು ಆದರೆ ಅವರಿಗೆ ಕೋಳಿ ಕೊಟ್ಟರೆ ಅವರು ತಿನ್ನುತ್ತಾರಾ? ಕುರಿಯ ರಕ್ತ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಾರಾ? ಲಿವರ್ ಕೊಟ್ಟರೆ ತಿನ್ನುತ್ತಾರಾ? ತಿನ್ನುವುದಕ್ಕೆ ಆಗುವುದಿಲ್ಲ. ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ? ಎಂದು ಹಂಸಲೇಖ ಅವರು ಪ್ರಶ್ನಿಸುತ್ತಾರೆ.
ಹಂಸಲೇಖ ಅವರು ವಾಸ್ತವ ವಿಚಾರವನ್ನೇ ಪ್ರಶ್ನೆ ಮಾಡಿದ್ದರೂ, ಇದೊಂದು ವಿವಾದ ಎಂಬಂತೆ ಬಿಂಬಿಸಲಾಗಿದೆ. ದಲಿತರ ಆಹಾರ, ಸಂಸ್ಕೃತಿಯನ್ನು ಒಪ್ಪದ ಯಾವ ಸ್ವಾಮೀಜಿಯಾದರೂ, ದಲಿತರ ಮನೆಗೆ ಭೇಟಿ ನೀಡಿದರೆ, ಅದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಹಂಸಲೇಖ ಅವರದ್ದಾಗಿತ್ತು. ಮಾತ್ರವಲ್ಲದೇ ಬಲಿತರು ದಲಿತರನ್ನು ಯಾವ ರೀತಿಯಾಗಿ ಭಾವನಾತ್ಮಕವಾಗಿ ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ಒಂದು ಕಲ್ಪನೆಯ ಮೂಲಕ ಹಂಸಲೇಖ ಅವರು ಪ್ರತಿಬಿಂಬಿಸಿದ್ದಾರೆ.
ದಲಿತರ ಮನೆಗೆ ಭೇಟಿ ನೀಡುವುದು ಎನ್ನುವುದೇ ಒಂದು ಜಾತಿ ಪದ್ಧತಿ. ನಾವು ದಲಿತರಿಂದ ಮೇಲಿನ ಜಾತಿಯವರು ಅಥವಾ ನಾವು ದೊಡ್ಡವರು ಹಾಗಾಗಿ ದಲಿತರು ಸಣ್ಣವರು, ಇವರ ಮೇಲಿನ ಅನುಕಂಪದಿಂದ ನಾವು ಅವರ ಮನೆಗೆ ಭೇಟಿ ನೀಡುತ್ತಿದ್ದೇವೆ ಎನ್ನುವ ದುರಾಹಂಕಾರದಿಂದ ಮೇಲ್ಜಾತಿಯವರು ಭೇಟಿ ನೀಡುತ್ತಾರೆ. ಆದರೆ, ವಾಸ್ತವವಾಗಿ ಅಸ್ಪೃಶ್ಯತೆಯನ್ನು ಕಳೆಯಬೇಕಾದರೆ, ಯಾರು ಅಸ್ಪೃಶ್ಯತೆಯನ್ನು ಆಚರಿಸುತ್ತಾರೋ, ಯಾರು ನಾವು ಮೇಲ್ಜಾತಿಯವರು ಎನ್ನುವ ಮಾನಸಿಕ ರೋಗದಿಂದ ಬಳಲುತ್ತಿದ್ದಾರೋ ಅಂತಹವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕೇ ಹೊರತು, ದಲಿತರ ಮನೆಗೆ ಭೇಟಿ ಎಂಬ ನಾಟಕ ಮಾಡುವುದಲ್ಲ ಎನ್ನುವುದನ್ನು ಇಂದು ದಲಿತರು ಕೂಡ ಅರ್ಥ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಗ್ಯದಲ್ಲಿ ಏರುಪೇರು
ದೇವರ ಪ್ರಸಾದ ಸೇವಿಸಿ ವಾಂತಿ ಭೇದಿ | 25ರಿಂದ 30 ಭಕ್ತರು ಅಸ್ವಸ್ಥ
ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಶಾಲೆಗಳಿಗೆ ರಜೆ
ಹೃದಯ ವಿದ್ರಾವಕ ಘಟನೆ: ಲಾರಿ ಹರಿದು 8 ವರ್ಷ ವಯಸ್ಸಿ ಬಾಲಕಿ ದಾರುಣ ಸಾವು!
ಮರಕ್ಕೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಕ್ಯಾಟರಿಂಗ್ ಮುಗಿಸಿ ಬರುತ್ತಿದ್ದ ಇಬ್ಬರು ಯುವಕರ ದಾರುಣ ಸಾವು!
ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ