ಫುಟ್ಬಾಲ್ ದಂತಕಥೆ ಬ್ರೆಝಿಲಿಯನ್ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಪೆಲೆ ನಿಧನ - Mahanayaka
3:20 AM Saturday 14 - December 2024

ಫುಟ್ಬಾಲ್ ದಂತಕಥೆ ಬ್ರೆಝಿಲಿಯನ್ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಪೆಲೆ ನಿಧನ

pelle
30/12/2022

ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಫುಟ್ಬಾಲ್ ದಂತಕಥೆ ಬ್ರೆಝಿಲಿಯನ್ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಪೆಲೆ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

82 ನೇ ವಯಸ್ಸಿನ ಪೆಲೆ ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಜಿಲ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1958, 1962 ಮತ್ತು 1970ರಲ್ಲಿ ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ ಗೆಲುವು ದಾಖಲಿಸಲು ಪೆಲೆ ಅವರ ಆಟ ಪ್ರಮುಖವಾಗಿತ್ತು.

ನವೆಂಬರ್ ಕೊನೆಯ ವಾರದಲ್ಲಿ ಪೆಲೆ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಈಚೆಗೆ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು ಇದೀಗ ಅವರು ನಿಧನರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ