ಜನರು ಹಳಿ ದಾಟಿ ರೈಲಿಗೆ ನುಗ್ಗಿದರಿಂದ್ದ ದುರಂತ: ದೆಹಲಿ ಕಾಲ್ತುಳಿತಕ್ಕೆ ಪ್ರತ್ಯಕ್ಷದರ್ಶಿಗಳ ಸ್ಪಷ್ಟನೆ

ಮಹಾ ಕುಂಭ ಮೇಳಕ್ಕಾಗಿ ಪ್ರಯಾಗ್ ರಾಜ್ ತಲುಪಲು ರೆಡಿಯಾಗಿದ್ದ ಭಕ್ತರ ಭಾರೀ ದಟ್ಟಣೆಯಿಂದಾಗಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಪ್ಲಾಟ್ ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಕಾಲ್ತುಳಿತ ಸಂಭವಿಸಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಗಧ ಎಕ್ಸ್ ಪ್ರೆಸ್ ನಿಗದಿತ ನಿರ್ಗಮನಕ್ಕೆ ಮೊದಲು ಪ್ಲಾಟ್ ಫಾರ್ಮ್ ಸಂಖ್ಯೆ 15 ಕ್ಕೆ ಬಂದಾಗ ಕಾಲ್ತುಳಿತ ಸಂಭವಿಸಿದೆ ಮತ್ತು ಅಲ್ಲಿ ಭಾರೀ ಜನಸಂದಣಿ ಇತ್ತು. ಹಲವಾರು ಜನರು ಹಳಿಗಳನ್ನು ದಾಟಿ ವಿವಿಧ ಬೋಗಿಗಳಿಗೆ ನುಗ್ಗಿದ್ದಾರೆ. ಅಲ್ಲದೇ ಪ್ಲಾಟ್ ಫಾರ್ಮ್ ನಲ್ಲಿದ್ದ ಇತರರು ಸಹ ರೈಲಿನೊಳಗೆ ಹತ್ತಲು ಮುಂದಾಗಿದ್ದಾರೆ. ಇದು ಕಾಲ್ತುಳಿತಕ್ಕೆ ಕಾರಣವಾಯಿತು.
ಪ್ರಯಾಗ್ ರಾಜ್ ಮತ್ತು ದೇಶದ ಇತರ ಭಾಗಗಳಿಗೆ ತೆರಳುತ್ತಿದ್ದ ವಾರಾಂತ್ಯದ ಜನಸಂದಣಿಯನ್ನು ನಿಭಾಯಿಸಲು ಸರಿಯಾದ ವ್ಯವಸ್ಥೆಗಳು ಮತ್ತು ಹೆಚ್ಚುವರಿ ರೈಲುಗಳು ಜಾರಿಯಲ್ಲಿವೆ ಎಂದು ರೈಲ್ವೆ ಹೇಳಿತ್ತಾದರೂ ಪ್ರತ್ಯಕ್ಷದರ್ಶಿಗಳು ಭಾರೀ ಜನಸಂದಣಿ ನಿಯಂತ್ರಣ ಮೀರಿತ್ತು ಮತ್ತು ಪರಿಸ್ಥಿತಿಯನ್ನು ನಿರ್ವಹಿಸಲು ಯಾವುದೇ ಪೊಲೀಸ್ ಸಿಬ್ಬಂದಿ ಇಲ್ಲ ಎಂದು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj