ಮತದಾನದ ಬಳಿಕ ಕುಸಿದು ಬಿದ್ದು ಸಾವು: ಪ್ರತ್ಯೇಕ ಪ್ರಕರಣಗಳಲ್ಲಿ ರಾಜ್ಯದಲ್ಲಿ ಮೂವರು ಸಾವು

ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮತದಾನ ಮಾಡಿ ಮನೆಗೆ ತೆರಳಿದ್ದ ಇಬ್ಬರು ಸಾವನ್ನಪ್ಪಿದರೆ, ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿಯೊಬ್ಬರು ನಿಧನರಾಗಿದ್ದಾರೆ.
ಕುಸಿದು ಬಿದ್ದ ವ್ಯಕ್ತಿ ಸಾವು:
ತುಮಕೂರು: ಮತದಾನದ ಬಳಿಕ ಹೃದಯಾಘಾತದಿಂದ ಮತದಾರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ರಮೇಶ್ ಮೃತ ದುರ್ದೈವಿಯಾಗಿದ್ದಾರೆ. ರಮೇಶ್, ಪತ್ನಿ ಜೊತೆ ತುಮಕೂರಿನ ಎಸ್ .ಎಸ್. ಪುರಂನ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಿ ನಂತರ ಮನೆಗೆ ತೆರಳಿದ್ದಾಗ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಶಿಕ್ಷಕಿ ಸಾವು:
ಚಿತ್ರದುರ್ಗದ ಹೊಟ್ಟೆಪ್ಪನಹಳ್ಳಿ ಮೇಗಳ ಗೊಲ್ಲರಹಟ್ಟಿಯಲ್ಲಿ. 55 ವರ್ಷದ ಶಾಲಾ ಶಿಕ್ಷಕಿ ಯಶೋಧ ಎಂಬುವವರು ಮತಗಟ್ಟೆ ಸಂಖ್ಯೆ 202ರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದರು.
ಇದ್ದಕ್ಕಿದ್ದಂತೆ ಯಶೋದಮ್ಮ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಯಶೋಧಮ್ಮ ಸಾವನ್ನಪ್ಪಿದ್ದಾರೆ. ಮೃತ ಶಿಕ್ಷಕಿ ಬೊಮ್ಮಸಮುದ್ರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
87 ವರ್ಷದ ವೃದ್ಧ ಸಾವು:
ಮಂಡ್ಯ ಜಿಲ್ಲೆಯಲ್ಲೂ ಮತದಾನದ ನಂತರ ಹಿರಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯಲ್ಲಿ 87 ವರ್ಷದ ಕುಂದೂರಯ್ಯ ಸಾವನ್ನಪ್ಪಿರುವವರು ಎಂದು ತಿಳಿದು ಬಂದಿದೆ. ಕುಂದೂರಯ್ಯ ಇಂದು ಬೆಳಗ್ಗೆ ಮತದಾನ ಮಾಡಿದ್ದರು. ಬಳಿಕ ಮನೆಗೆ ಬಂದ ಮೇಲೆ ಪ್ರಾಣ ಬಿಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth