500 ರೂಪಾಯಿ ತೆಗೆದರೆ 2,500 ರೂ. ಕೊಡ್ತಿದ್ದ ಎಟಿಎಂ: ಎಟಿಎಂ ಕೇಂದ್ರದ ಮುಂದೆ ಜನವೋ ಜನ!

atm
16/06/2022

ಮಹಾರಾಷ್ಟ್ರ:  ಎಟಿಎಂನಲ್ಲಿ 500 ರೂಪಾಯಿ ಡ್ರಾ ಮಾಡಿದರೆ, 500 ರೂಪಾಯಿಯ 5 ನೋಟುಗಳನ್ನು ಎಟಿಎಂ ನೀಡಿದ ಘಟನೆ ನಡೆದಿದ್ದು, ವಿಷಯ ತಿಳಿದು ಜನರು ಎಟಿಎಂ ಮುಂದೆ ನೆರೆದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಎಟಿಎಂವೊಂದರಲ್ಲಿ ನಡೆದಿದೆ.

ನಾಗ್ಪುರ ನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್ ನ ಎಟಿಎಂನಲ್ಲಿ ಈ ಘಟನೆ ನಡೆದಿದ್ದು,  ಈ ಎಟಿಎಂನಲ್ಲಿ ನಮೂದಿಸಿದ ಮೊತ್ತಕ್ಕಿಂತ ಐದು ಪಟ್ಟು ಅಧಿಕ ಹಣ ಡ್ರಾ ಆಗುತ್ತಿತ್ತು.

ಎಟಿಎಂವೊಂದರಲ್ಲಿ ನಾವು ಡ್ರಾ ಮಾಡುವುದಕ್ಕಿಂತ 5 ಪಟ್ಟು ಅಧಿಕ ಹಣ ಸಿಗುತ್ತಿದೆ ಎನ್ನುವ ಮಾಹಿತಿ ಕಾಡ್ಗಿಚ್ಚಿನಂತೆ ಹರಿದಾಡಿದ್ದು, ಈ ವೇಳೆ ಸುತ್ತಮುತ್ತಲಿನ ಜನರು  ತಮ್ಮ ಅದೃಷ್ಟ ಪರೀಕ್ಷೆಗಾಗಿ ಎಟಿಎಂ ಮುಂದೆ ಹಣ ತೆಗೆದುಕೊಳ್ಳಲು ಸಾಲು ನಿಂತಿದ್ದಾರೆ.

ಈ ನಡುವೆ ಗ್ರಾಹಕರೊಬ್ಬರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ತೆರವುಗೊಳಿಸಿ ಎಟಿಎಂ ಕೇಂದ್ರವನ್ನು ಬಂದ್ ಮಾಡಿದ್ದಾರೆ. ಬಳಿಕ ಬ್ಯಾಂಕ್ ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎಟಿಎಂಗೆ ಹಣ ಹಾಕುವ ವೇಳೆ(ರೀಫಿಲ್) 100 ರೂಪಾಯಿಗಳನ್ನಿಡಬೇಕಾದ ಟ್ರೆಯಲ್ಲಿ  ಸಿಬ್ಬಂದಿ ಕೈ ತಪ್ಪಿ 500 ರೂಪಾಯಿಯನ್ನಿಟ್ಟಿದ್ದು, ಹೀಗಾಗಿ 500 ರೂಪಾಯಿ  ನಮೂದಿಸಿದಾಗ 5 ನೋಟುಗಳನ್ನು  ಎಟಿಎಂ ಮೆಷಿನ್ ವಿತರಿಸುತ್ತಿತ್ತು ಎಂದು ಖಾಪರ್ಖೇಡಾ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ

ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದ ಒಂಟಿ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ವಾಹನ ಪಲ್ಟಿ!

ಸಾಯಿ ಪಲ್ಲವಿ  ಸತ್ಯ ಹೇಳಿದ್ದಾರೆ ಎಂದ ನಟಿ ರಮ್ಯಾ!

ಕೋಣೆಯ ಕರ್ಟನ್ ಸರಿಪಡಿಸುತ್ತಿದ್ದ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಇತ್ತೀಚಿನ ಸುದ್ದಿ

Exit mobile version