ಪ್ರತಿಮೆಗಳ ಜೊತೆಗೆ ಇವರು ಹೇಗೆಲ್ಲ ಫೋಟೋ ತೆಗೆದುಕೊಳ್ಳುತ್ತಾರೆ ನೋಡಿ! - Mahanayaka
7:24 AM Thursday 12 - December 2024

ಪ್ರತಿಮೆಗಳ ಜೊತೆಗೆ ಇವರು ಹೇಗೆಲ್ಲ ಫೋಟೋ ತೆಗೆದುಕೊಳ್ಳುತ್ತಾರೆ ನೋಡಿ!

main photos
20/06/2022

ಪ್ರತಿಮೆಗಳ ಸ್ಥಾಪನೆಗಾಗಿ ನಾವು ದಿನನಿತ್ಯ ಹೊಡೆದಾಡುತ್ತಲೇ ಇರುತ್ತೇವೆ. ಕೆಲವು ನಾಯಕರ ಪ್ರತಿಮೆ ಸ್ಥಾಪನೆಗಂತೂ ನಮ್ಮಲ್ಲಿ ಪರ ವಿರೋಧ, ಪ್ರತಿಭಟನೆಗಳು, ಹಲ್ಲೆಗಳು, ಪರಸ್ಪರ ಹೊಡೆದಾಟಗಳು ನಡೆಯುತ್ತಲೇ ಇರುತ್ತವೆ. ಆದರೆ, ವಿದೇಶದಲ್ಲಿ ಜನರ ಪ್ರತಿಮೆಯ ಕ್ರೇಜ್ ಬೇರೆಯದ್ದೇ ಆಗಿವೆ. ಜನರು ಶಿಲ್ಪಗಳ ಜೊತೆಗೆ ವಿಭಿನ್ನವಾಗಿ ಫೋಟೋ ತೆಗೆದುಕೊಳ್ಳುವ ಹವ್ಯಾಸ ಹೊಂದಿದ್ದಾರೆ.  ಈ ಫೋಟೋಗಳು ಜನರಿಗೆ ಮುದ ನೀಡುವಂತಿದೆ.

ರೌಡಿ ಬೇಬಿ!

ಇಲ್ಲೊಂದು ರೌಡಿ ಬೇಬಿಯ ಶಿಲ್ಪದಿಂದ ವ್ಯಕ್ತಿಯೊಬ್ಬ ತಾನು ಮಗುವಿನ ಕೈಯಿಂದ ಹೊಡೆಸಿಕೊಳ್ಳುವಂತೆ ಪೋಸ್ ನೀಡಿದ್ದಾನೆ. ಈ ಫೋಟೋ, ಮಗುವಿನ ಶಿಲ್ಪದ ಅಂದವನ್ನು ಹೆಚ್ಚಿಸಿರುವುದಂತೂ ನಿಜ

ಮುಂಗೋಪಿ ಬಾಸ್

ಇಲ್ಲೊಬ್ಬ ತನ್ನ ಮುಂಗೋಪಿ ಪಾಸ್ ನ್ನು ಪ್ರತಿಮೆ ರೂಪದಲ್ಲಿ ನೆನಪು ಮಾಡಿಕೊಂಡಿದ್ದಾನೆ. ಸರಿಯಾದ ಸಮಯಕ್ಕೆ ಕೆಲಸ ಮಾಡದಿದ್ದರೆ, ಬಾಸ್ ಯಾವ ರೀತಿ ಹೊಡೆಯುತ್ತಾನೆ ಎನ್ನುವುದನ್ನು ತೋರಿಸಲು ಪೋಸ್ ನೀಡಿದ್ದಾನೆ.

ಲಂಚ ನೀಡುವ ವಿಧಾನ

ಇಲ್ಲೊಬ್ಬ ಪ್ರತಿಮೆಯ ಕೈಗೆ ಯಾರಿಗೂ ಗೊತ್ತಾಗದಂತೆ ಲಂಚ ಕೊಡುತ್ತಿದ್ದಾನೆ. ಪ್ರಪಂಚ ವ್ಯಾಪಿ ನಡೆಯುತ್ತಿರುವ ಭ್ರಷ್ಟಾಚಾರ ಎಲ್ಲ ದೇಶದಲ್ಲೂ ಅಪರಾಧವಾಗಿದೆ. ಆದರೂ ಭ್ರಷ್ಟಾಚಾರ ಎಲ್ಲೆಡೆ ಎಗ್ಗಿಲ್ಲದೇ ನಡೆಯುತ್ತದೆ. ಈ ಶಿಲ್ಪಕ್ಕೆ ಲಂಚ ಕೊಡುವ ಮೂಲಕ ವ್ಯಕ್ತಿಯೋರ್ವ ಲಂಚ ಎಂಬ ಪಿಡುಗನ್ನು ನೆನಪಿಸಿದ್ದಾನೆ.

ಒಬ್ಬಂಟಿ ಮಗು

ಒಂದು ಕಾಲದಲ್ಲಿ ಮನೆ ಎಂದರೆ, ಮನೆ ತುಂಬಾ ಮಕ್ಕಳಿರಬೇಕು ಎಂದು ಹಿರಿಯರು ಹೇಳುತ್ತಿದ್ದರು. ಆದರೆ, ಇಂದು ಒಂದು ಮಗು ಸಾಕು ಎನ್ನುವ ನಿರ್ಧಾರಕ್ಕೆ ತಂದೆ ತಾಯಿ ಬಂದು ಬಿಡುತ್ತಾರೆ. ಜನ ಸಂಖ್ಯಾ ನಿಯಂತ್ರಣಕ್ಕೆ ಇದು ಉತ್ತಮವಾದದ್ದೇ ಆದರೂ, ಮಕ್ಕಳು ಒಬ್ಬಂಟಿಯಾಗುವುದನ್ನು ತಪ್ಪಿಸಲು ಸಾಕಷ್ಟು ತಂದೆ ತಾಯಿಗಳು ಬಯಸೋದಿಲ್ಲ. ಇಲ್ಲೊಂದು ಅದ್ಭುತವಾದ ಶಿಲ್ಪದ ಕೈ ಹಿಡಿದುಕೊಂಡಿರುವ ಮಗು, ವಿಶ್ವದ ಒಬ್ಬಂಟಿ ಮಕ್ಕಳ ಪ್ರತಿನಿಧಿಯಂತೆ ಕಂಡು ಬರುತ್ತಿದೆ.

ಸ್ವಚ್ಛತೆಯ ಪಾಠ

ಸಾಕಷ್ಟು ಜನರಿಗೆ ತಮ್ಮ ದೇಹದ ಗುಪ್ತ ಭಾಗಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವೇ ಇರುವುದಿಲ್ಲ. ನಮ್ಮಲ್ಲಿ ಸಾಕಷ್ಟು ಜನರು ಈ ವಿಚಾರದಲ್ಲಿ ಹೆಚ್ಚು ನಿರ್ಲಕ್ಷ್ಯವಹಿಸುತ್ತಾರೆ. ಇದರಿಂದಾಗಿ ದೇಹದ ದುರ್ವಾಸನೆ ಕೂಡ ಹೆಚ್ಚುತ್ತದೆ. ನೀವು ನಿಮ್ಮ ಪ್ರೀತಿ ಪಾತ್ರರನ್ನು, ಸ್ನೇಹಿತರನ್ನು ಹಗ್ ಮಾಡಲು ಹೋದರೆ ಅವರು ನಿಮ್ಮ ದುರ್ವಾಸನೆಯಿಂದ ಕಂಗಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ತಿಳಿಸಲೆಂದೇ ಪ್ರತಿಮೆಯೊಂದರ ಕೈಗೆ ರೇಸರ್ ನೀಡಿ, ಅರಿವು ಮೂಡಿಸಲಾಗಿದೆ.

ದಾರಿಯಲ್ಲಿ ಹೋಗುವಾಗ ಎಚ್ಚರಿಕೆ

ನಾವು ದಾರಿಯಲ್ಲಿ ನಡೆದಾಡುವ ವೇಳೆ ಎಚ್ಚರ ವಹಿಸಬೇಕು. ನಾನಾ ಜನರು ಓಡಾಡುವ ರಸ್ತೆಯಲ್ಲಿ ಕೆಲವರು ತಮ್ಮ ಕೈ ಕಾಲನ್ನು  ಚಲನೆಗೊಳಿಸಿ ಮಾತನಾಡುತ್ತಿರುತ್ತಾರೆ. ಇವರ ಕೈ ಯಾವಾಗ ನಮ್ಮ ಕೆನ್ನೆಗೆ ತಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದನ್ನು ಈ ಪ್ರತಿಮೆ ಮೂಲಕ ವ್ಯಕ್ತಿಯೊಬ್ಬರು ಸಾಬೀತು ಪಡಿಸಿದ್ದಾರೆ.

ಸೆಲ್ಫಿ ಕ್ರೇಜ್

ದೊಡ್ಡವರಿಂದ ಹಿಡಿದು ಸಣ್ಣವರ ವರೆಗೂ ಇಂದು ಸೆಲ್ಫಿ ಕ್ರೇಜ್ ಇಲ್ಲದವರಿಲ್ಲ. ವಯೋವೃದ್ಧರೊಬ್ಬರ ಶಿಲ್ಪದ ಕೈಗೆ ಮೊಬೈಲ್ ನೀಡಿರುವ ವ್ಯಕ್ತಿ, ಸೆಲ್ಫಿ ಹುಚ್ಚು ಎಷ್ಟಿದೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಕಂಡವರ ವಿಚಾರದಲ್ಲಿ ಮೂಗುತೂರಿಸುವುದು

ಕಂಡವರ ವಿಚಾರದಲ್ಲಿ ಕೆಲವರು ಅನಗತ್ಯವಾಗಿ ತಲೆ ಹಾಕುವುದು ಹೆಚ್ಚು. ಯಾರದ್ದೋ ಸಮಸ್ಯೆಗಳ ಪರಿಹಾರಕ್ಕೆ ಹೋಗಿ ನಾವು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೇವೆ ಎನ್ನುವುದನ್ನು ವ್ಯಕ್ತಿಯೊಬ್ಬ ಪ್ರತಿಮೆಗಳನ್ನು ಬಳಸಿಕೊಂಡು ತೋರಿಸಿಕೊಟ್ಟಿದ್ದಾನೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೊದಲ ಬಾರಿಗೆ ತನ್ನ ಮಗುವಿನ ಚಿತ್ರ ಹಂಚಿಕೊಂಡ ಯುವರಾಜ್ ಸಿಂಗ್

ಬಲಪಂಥೀಯರ ಬಾಯ್ಕಾಟ್ ಬೆದರಿಕೆ  ನಡುವೆಯೇ 15 ಕೋಟಿ ಬಾಚಿದ ಸಾಯಿ ಪಲ್ಲವಿ ಚಿತ್ರ!

ಆಕಾಶದಲ್ಲೇ ವಿಮಾನದ ರೆಕ್ಕೆಗೆ ಹತ್ತಿಕೊಂಡ ಬೆಂಕಿ!

ಸಿದ್ದರಾಮಯ್ಯ ರೋಹಿತ್ ಚಕ್ರ ತೀರ್ಥನ ಬಂಧನಕ್ಕೆ ಕರೆ ನೀಡಿದ್ದು ಅಸಂವಿಧಾನಿಕ: ನಟ ಚೇತನ್

ಜೀವನ ಸಾಗಿಸಲು ಬೀದಿ ಬದಿ ಸಾಬೂನು ಮಾರಾಟ ಮಾಡುತ್ತಿರುವ ಖ್ಯಾತ ನಟಿ

ಇತ್ತೀಚಿನ ಸುದ್ದಿ