ವಕ್ಫ್ ಮಸೂದೆ ವಿರುದ್ಧ ಜನಾಕ್ರೋಶ: ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ

ದೆಹಲಿಯ ಜಂತರ್ ಮಂತರ್ ನಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಏರ್ಪಡಿಸಿದ್ದ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕಾನೂನು ತಜ್ಞರು ವಿದ್ವಾಂಸರು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎಎಪಿ, ಎ ಐ ಎಂ ಐ ಎಂ, ಸಿ ಪಿ ಐ, ಸಿ ಪಿ ಎಂ, ಐ ಯು ಎಂ ಎಲ್, ಟಿ ಎಮ್ ಸಿ, ಬಿಜೆಡಿ, ಮತ್ತು wpi ಪಕ್ಷಗಳು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರಕಾರಕ್ಕೆ ಪ್ರಬಲ ಎಚ್ಚರಿಕೆಯನ್ನು ನೀಡಿದವು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಪ್ರತಿಭಟನೆಯನ್ನು ಕವರೇಜ್ ಮಾಡಿದವು.
ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಅಧ್ಯಕ್ಷ ಮೌಲಾನ ಖಾಲಿದ್ ಸೈಫುಲ್ಲಾ ರಹ್ಮಾನಿ ಮಾತಾಡಿ ಈ ಪ್ರತಿಭಟನೆಯು ವಕ್ಫ್ ವಿರೋಧಿ ಹೋರಾಟದ ಮುನ್ನುಡಿಯಾಗಿದೆ ಎಂದು ಹೇಳಿದರು.
ಲಾಬೋರ್ಡ್ ನ ಉಪಾಧ್ಯಕ್ಷ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಸಯ್ಯದ್ ಸ ಆದತುಲ್ಲಾ ಹುಸೇನಿ ಅವರು ಮಸೂದೆಯಲ್ಲಿರುವ ಆಕ್ಷೇಪಾರ್ಹ ಅಂಶಗಳ ಸುತ್ತ ಬೆಳಕು ಚೆಲ್ಲಿದರು. ಜಮಿ ಅತೆ ಉಲಮಾಯೆ ಹಿಂದ್ ನ ಅಧ್ಯಕ್ಷ ಮೌಲಾನ ಮಹಮ್ಮದ್ ಅಸದ್ ಮದನಿ, ಸಂಸದ ಅಸದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಮುಂತಾದವರು ಮಸೂದೆಯ ಲೋಪದೋಷಗಳನ್ನು ಸಭೆಯ ಮುಂದಿಟ್ಟರು. ಟಿಎಂಸಿ ಸಂಸದೆ ಮಹುವ ಮೊಯಿತ್ರ ಅತ್ಯಂತ ವಿವರಣಾತ್ಮಕವಾಗಿ ಮಾತಾಡಿದ್ರು.
ಜಂತರ್ ಮಂತರ್ ನಲ್ಲಿ ನಡೆದಿರುವ ಈ ಸಭೆ ಆರಂಭವಾಗಿದ್ದು ದೇಶಾದ್ಯಂತ ಇಂತಹ ಪ್ರತಿಭಟನಾ ಸಭೆಗಳನ್ನು ಏರ್ಪಡಿಸುವುದಾಗಿ ಲಾ ಬೋರ್ಡ್ ಘೋಷಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj