ಪೇರಳೆ ಹಣ್ಣಿನಾಸೆ: ಮರ ಹತ್ತಲು ಹೋಗಿ ಪ್ರಾಣವನ್ನೇ ಕಳಕೊಂಡ ಬಾಲಕ

ಕಡಬ: ಪೇರಳೆ ಹಣ್ಣು ಕೊಯ್ಯಲು ಮರ ಹತ್ತಲು ಹೋಗಿ ಆಯ ತಪ್ಪಿಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ನಡೆದಿದೆ.
ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ್ ಗೌಡ ಅವರ ಪುತ್ರ ಉಪ್ಪಾಸ್ ಡಿ.ಎಂ. (8) ಮೃತ ಬಾಲಕನಾಗಿದ್ದಾನೆ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಪ್ಪಾಸ್, ಓದಿನಲ್ಲಿ ಪ್ರತಿಭಾನ್ವಿತನಾಗಿದ್ದ.
ಈ ಎಂದಿನಂತೆ ಶಾಲೆ ಹೋಗಿ ಸಂಜೆ ಹಿಂದಿರುಗಿ ಮನೆಗೆ ಬಂದಿದ್ದಾನೆ. ಬಳಿಕ ಮನೆ ಸಮೀಪದ ಪೇರಳೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದು, ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು