ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸೈಕಲ್ ತುಳಿಯುವುದೇ ಪರಿಹಾರ | ಬಿಜೆಪಿ ಸಚಿವರ ಹೇಳಿಕೆಗೆ ಸಾರ್ವಜನಿಕರು ಗರಂ!
ಭೋಪಾಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯ ಪ್ರದೇಶದ ಬಿಜೆಪಿ ಸಚಿವರೊಬ್ಬರು ನೀಡಿರುವ ಬಿಟ್ಟಿ ಸಲಹೆ ಇದೀಗ ಗಾಯದ ಮೇಲೆ ಉಪ್ಪು ನೀರು ಎರಚಿದಂತಾಗಿದ್ದು, ಜನರು ಸಚಿವರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೈಲ ಬೆಲೆ ಏರಿಕೆ ಬಗ್ಗೆ ಸಲಹೆ ನೀಡಿದ ಇಂಧನ ಸಚಿವ ಪ್ರಧುಮಾನ್ ಸಿಂಗ್, ಮಾರುಕಟ್ಟೆಗೆ ಹೋಗುವಾಗ ಸೈಕಲ್ ನಲ್ಲಿ ಓಡಾಡಿ, ಇದರಿಂದ ಪರಿಸರ ರಕ್ಷಣೆಯಾಗುತ್ತದೆ. ಮಾಲಿನ್ಯ ತಡೆಯಾಗುತ್ತದೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಬೆಲೆ ಲೀಟರ್ ಗೆ 107 ಆಗಿರುವ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಬಂದ ಹಣವನ್ನು ಆರೋಗ್ಯ ಕ್ರಮಕ್ಕೆ ನಾವು ಬಳಸುತ್ತಿದ್ದೇವೆ. ಬಡವರ ಯೋಜನೆಗೆ ಬಳಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಇನ್ನೂ ಸಚಿವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಚಿವರೇ ಮೊದಲು ನಿಮ್ಮ ಸರ್ಕಾರಿ ಕಾರನ್ನು ಸರ್ಕಾರಕ್ಕೆ ಹಸ್ತಾಂತರಿಸಿ, ಸೈಕಲ್ ನಲ್ಲಿ ಓಡಾಡಿ ಮಾದರಿಯಾಗಿ. ಮಾಲಿನ್ಯ ತಡೆ ಕಾರ್ಯಕ್ರಮ ನಿಮ್ಮಿಂದಲೇ ಆರಂಭವಾಗಲಿ ಎಂದು ಸಾರ್ವಜನಿಕರು ಸವಾಲು ಹಾಕಿದ್ದಾರೆ.