ಪೆಟ್ರೋಲ್ ಬೆಲೆ ಏರಿಕೆ ‘ಐತಿಹಾಸಿಕ ಶೋಷಣೆ’ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡಿರುವುದು ಐತಿಹಾಸಿಕ ಶೋಷಣೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.
ಸಂಸ್ಕರಣೆಗೊಂಡ ಬಳಿ ಪೆಟ್ರೋಲ್ ಪ್ರತಿ ಲೀಟರ್ ಗೆ 30ರೂ.ನಷ್ಟು ಬೆಲೆಗೆ ಸಿಗುತ್ತದೆ. ಎಲ್ಲ ತೆರಿಗೆಗಳು ಸೇರಿದ ಬಳಿ ಇದರ ಬೆಲೆ 60 ರೂಪಾಯಿಗಳಷ್ಟಾಗುತ್ತದೆ. ನನ್ನ ಪ್ರಕಾರ ಪೆಟ್ರೋಲ್ ನ್ನು ಪ್ರತಿ ಲೀಟರ್ ಗೆ 40 ರೂಪಾಯಿಗಳಂತೆ ಮಾರಾಟ ಮಾಡಬೇಕು ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಟ್ವೀಟ್ ಮಾಡಿದ್ದು, ಸೋಮವಾರದವರೆಗೆ ಸತತ 6 ದಿಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ.
Petrol price at Rs. 90 per litre is a monumental exploitation by GoI of the people of India. The price ex-refinery of petrol is Rs. 30/litre. All kinds of taxes and Petrol pump commission add up the remainder Rs.60. In my view petrol must sell at max. Rs. 40 per litre.
— Subramanian Swamy (@Swamy39) December 7, 2020