ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ 150ರ ಗಡಿದಾಟುವ ಸಾಧ್ಯತೆ! - Mahanayaka
4:29 AM Monday 15 - September 2025

ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ 150ರ ಗಡಿದಾಟುವ ಸಾಧ್ಯತೆ!

petrol diesel price
09/07/2021

ಬೆಂಗಳೂರು: ಭಾರತದಲ್ಲಿ  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರತೀ ದಿನವೂ ಆಗುತ್ತಲೇ ಇದೆ. ಪೆಟ್ರೋಲ್ ಬೆಲೆ ನೂರರ ಗಡಿದಾಟಿ ಮುಂದುವರಿಯುತ್ತಲೇ ಇದ್ದು, ತೈಲ ಬೆಲೆ 150ರ ಗಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Provided by

ಭಾರತದಲ್ಲಿ ಮೊದಲ ಬಾರಿಗೆ  ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿತ್ತು. ಇದೀಗ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಲಡಾಕ್, ಜಮ್ಮು ಕಾಶ್ಮೀರ, ಒಡಿಶಾ, ತಮಿಳುನಾಡು, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ, ದೆಹಲಿ, ಪಶ್ಚಿಮ ಬಂಗಾಳ ಈ 16 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿದಾಡಿದೆ.

ಬೆಂಗಳೂರಿನಲ್ಲಿ ಜುಲೈ 8ರ ವೇಳೆಗೆ 104ಕ್ಕೆ ಪೆಟ್ರೋಲ್ ಬೆಲೆ ಬಂದಿ ನಿಂತಿದೆ. ಈ ಎಲ್ಲ ಸ್ಥಿತಿಗಳನ್ನು ನೋಡಿದರೆ, ಪೆಟ್ರೋಲ್ ಬೆಲೆ ರಾಜ್ಯ ಮಾತ್ರವಲ್ಲದೇ ದೇಶದಲ್ಲಿಯೇ 150 ರೂ. ಗಡಿ ದಾಟುವ ಸಾಧ್ಯತೆ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಇದರ ಜೊತೆ ತಜ್ಞರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಪೆಟ್ರೋಲ್, ಡೀಸೆಲ್ ಬೆಲೆ 150ರ ಗಡಿದಾಟುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾದ ಏಟಿಗೆ ತತ್ತರಿಸಿರುವ ಜನರ ಹೆಗಲಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೃಹತ್ ಹೊರೆಯಾಗಿ ಪರಿಣಮಿಸಿದೆ

ಇತ್ತೀಚಿನ ಸುದ್ದಿ